ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ಸಿಬ್ಬಂದಿ ಕಳೆದುಕೊಂಡ ಹಣದ ಚೀಲ ಅಡ್ಯಾರ್ನ ಗ್ರಾನೈಟ್ ವರ್ಲ್ಡ್ ಮಾಲೀಕ ಯಾಕೂಬ್ ಅವರಿಗೆ ಸಿಕ್ಕಿದ್ದು, ಅವರು ಪೊಲೀಸರಿಗೆ ಒಪ್ಪಿಸುವ ಮೂಲಕ ಯಾಕೂಬ್ ಅವರು ಪ್ರಾಮಾಣಿಕತೆ ಹಾಗೂ ಮಾನವೀಯತೆ ಮೆರೆದಿದ್ದಾರೆ.
ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ಸಿಬ್ಬಂದಿ ಬ್ಯಾಂಕ್ಗೆ ಜಮಾ ಮಾಡಲು ಕೊಂಡೊಯ್ಯುತ್ತಿದ್ದ ಸಂಸ್ಥೆಯ ಹಣದ ಚೀಲ ದಾರಿಮಧ್ಯೆ ಕಳೆದುಹೋದ ಘಟನೆ ನಡೆದಿದೆ.
ಆಗಸ್ಟ್ ೨೧ರಂದು ಹಣ ಕೊಂಡೊಯ್ಯುವ ಸಂದರ್ಭದಲ್ಲಿ ಚೀಲ ಕಳೆದುಹೋಗಿದ್ದು, ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಣದ ಚೀಲ ಸಿಕ್ಕಿದೆ.
ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಯಾಕೂಬ್ ಅವರು ಕೂಡಲೇ ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯ ಉಪ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಹಣವನ್ನು ಒಪ್ಪಿಸಿದ್ದಾರೆ.
ವಿಷಯ ತಿಳಿದ ಮಾಂಡೋವಿ ಮೋಟಾರ್ಸ್ ಸಂಸ್ಥೆಯ ಡಿಜಿಎಂ ಅಕೌಂಟ್ಸ್ ಅಶೋಕ್ ಕುಮಾರ್ ಹಾಗೂ ಸೀನಿಯರ್ ಮ್ಯಾನೇಜರ್ ಎಚ್.ಆರ್. ಶಿವಪ್ರಸಾದ್ ಅವರು ಉಪ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಸಂಸ್ಥೆಯ ಪರವಾಗಿ ಹಣವನ್ನು ಸ್ವೀಕರಿಸಿದ್ದಾರೆ.
ಸಂಸ್ಥೆಗೆ ಸೇರಿದ ಹಣವನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಮೂಲಕ ಯಾಕೂಬ್ ಅವರು ಪ್ರಾಮಾಣಿಕತೆ ಹಾಗೂ ಮಾನವೀಯತೆ ಮೆರೆದಿದ್ದಾರೆ. ಅವರ ಈ ನಡೆಗೆ ಮಾಂಡೋವಿ ಮೋಟಾರ್ಸ್ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದ ಸಲ್ಲಿಸಲಾಗಿದೆ.
ಯಾಕೂಬ್ ಅವರ ಪ್ರಾಮಾಣಿಕ ನಡೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

