ಸ್ನೇಹ, ಸಹಬಾಳ್ವೆ, ಸಂತೋಷ ಮತ್ತು ಮಾನವೀಯತೆಯ ಸಂದೇಶ ಸಾರುವ ಓಣಂ ಹಬ್ಬವನ್ನು ಸ್ನೇಹಾಲಯದಲ್ಲಿ ಸಂಭ್ರಮ, ಸಡಗರ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು.
ಸಂಸ್ಥೆಯ ನಿವಾಸಿಗಳು ಹಾಗೂ ಸಿಬ್ಬಂದಿ ಒಟ್ಟಾಗಿ ಸೇರಿ ಹಬ್ಬವನ್ನು ಆಚರಿಸಿದ್ದು, ವಿವಿಧ ಮನರಂಜನಾ ಆಟಗಳು ಹಾಗೂ ಸ್ನೇಹಪೂರ್ಣ ಸ್ಪರ್ಧೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ ಸ್ನೇಹಾಲಯದ ಸಂಸ್ಥಾಪಕ ಹಾಗೂ ನಿರ್ದೇಶಕ ಬ್ರದರ್ ಜೋಸೆಫ್ ಕ್ರಾಸ್ಟಾ, ಸಹ-ಸಂಸ್ಥಾಪಕಿ ಒಲಿವಿಯಾ ಕ್ರಾಸ್ಟಾ, ವೈದ್ಯಕೀಯ ವಿಭಾಗದ ಮುಖ್ಯಸ್ಥ ಕ್ಲಿಂಟ್ ಜೋಸೆಫ್ ಸೇರಿದಂತೆ ಟ್ರಸ್ಟಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಗಣ್ಯರು ಓಣಂ ಹಬ್ಬದ ಮಹತ್ವವನ್ನು ಹಂಚಿಕೊಂಡು ಶುಭಾಶಯ ಸಲ್ಲಿಸಿದರು.

ಆಚರಣೆಯ ಪ್ರಮುಖ ಆಕರ್ಷಣೆಯಾಗಿದ್ದ ಸಾಂಪ್ರದಾಯಿಕ ಓಣಂ ಸದ್ಯವನ್ನು ಸಿಬ್ಬಂದಿ ಹಾಗೂ ನಿವಾಸಿಗಳು ಒಟ್ಟಾಗಿ ಕುಳಿತು ಸವಿದರು. ಒಂದೇ ಸಾಲಿನಲ್ಲಿ ಊಟ ಮಾಡುವ ಮೂಲಕ ಸಮಾನತೆ, ಸಹೋದರತ್ವ ಮತ್ತು ಒಗ್ಗಟ್ಟಿನ ಸಂದೇಶ ಸಾರಿದರು.
ನಗು, ಸಂತೋಷ ಹಾಗೂ ಸ್ನೇಹದಿಂದ ಕೂಡಿದ್ದ ಸ್ನೇಹಾಲಯದ ಓಣಂ ಆಚರಣೆ, ಹಬ್ಬವು ಕೇವಲ ಆಚರಣೆಯಲ್ಲ; ಬದಲಾಗಿ ಮನಸ್ಸುಗಳನ್ನು ಬೆಸೆಯುವ ಮತ್ತು ಮಾನವೀಯತೆಯನ್ನು ಸಂಭ್ರಮಿಸುವ ಸಂದರ್ಭ ಎಂಬುದನ್ನು ಸಾರಿತು.


