HomeFresh Newsಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.-2ರ ಅಧ್ಯಕ್ಷರಾಗಿ ವಿಶ್ವನಾಥ ರೈ ಕಳಂಜ ಆಯ್ಕೆ

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.-2ರ ಅಧ್ಯಕ್ಷರಾಗಿ ವಿಶ್ವನಾಥ ರೈ ಕಳಂಜ ಆಯ್ಕೆ

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.- 2 ಅಧ್ಯಕ್ಷರಾಗಿ ಶ್ರೀ ವಿಶ್ವನಾಥ ರೈ ಕಳಂಜರವರು ಆಯ್ಕೆಯಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಕಳಂಜದವರಾಗಿದ್ದು, 2020ರಿಂದ 2023ರ ವರೆಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷರಾಗಿ, ಪ್ರಸ್ತುತ ಜಿಲ್ಲಾ ಸದಸ್ಯರಾಗಿ ,ಕಳಂಜ ಮಂಡಲ ಪಂಚಾಯತ್‌ ಅಧ್ಯಕ್ಷರಾಗಿ 10ವರ್ಷಗಳ ಕಾಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಂಘ, ಸುಳ್ಯ ತಾಲೂಕಿನ 3 ಬಾರಿ ಉಪಾಧ್ಯಕ್ಷರಾಗಿ, APMC ಸುಳ್ಯದ ಎರಡು ಬಾರಿ ನಿರ್ದೇಶಕರಾಗಿ , KMF ಮಂಗಳೂರಿನ ನಿರ್ದೇಶಕರಾಗಿ , ದ.ಕ.ಜಿಲ್ಲಾ ಕೃಷಿ ಉತ್ಪನ್ನಮಾರಾಟ ಸಂಘ ಇದರ 3 ಬಾರಿ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ದಿನಾಂಕ 20.08.2026ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಂಗಣದಲ್ಲಿ ನಡೆದ ಜಿಲ್ಲಾ ಜನಜಾಗೃತಿ ಪದಾಧಿಕಾರಿಗಳ ಸಭೆಯಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ, ರಾಜ್ಯ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಕಾರ್ಯದರ್ಶಿಯಾಗಿರುವ ಶ್ರೀ ವಿವೇಕ್‌ ವಿನ್ಸೆಂಟ್‌ ಪಾಯಸ್, ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್‌ ಎ ರಾಮಚಂದ್ರ , ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ಅಧ್ಯಕ್ಷರಾದ ಸತೀಶ್‌ ನಾಯ್ಕ , ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ್‌ ಆಚಾರ್ಯ , ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments