ತೋಕೂರು: ರೋಟರಿ ಕ್ಲಬ್ ಬೈಕಂಪಾಡಿ ಇದರ ಆಶ್ರಯದಲ್ಲಿ ಫೇಮಸ್ ಯೂತ್ ಕ್ಲಬ್ ರೋಟರಿ ಸಮುದಾಯದಳ (RCC) ದ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಸಂಸ್ಥೆಯ ಕಾರ್ಯಾಲಯದಲ್ಲಿ ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷರಾದ ರೋ. ಕಶ್ಯಪ್ ಪ್ರಭುರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ರೋಟರಿ ಕ್ಲಬ್ ಬೈಕಂಪಾಡಿಯ ವಲಯ ಸೇನಾನಿ ರೊಟೇರಿಯನ್ ಪಿ.ಎಚ್.ಎಫ್ ಮಹೇಶ್ ಕುಮಾರ್ ರವರು ಪದಗ್ರಹಣವನ್ನು ನೆರವೇರಿಸಿ ಕೊಟ್ಟರು.
ಫೇಮಸ್ ರೋಟರಿ ಸಮುದಾಯದಳದ ನೂತನ ಅಧ್ಯಕ್ಷರಾಗಿ ಶ್ರೀ ವಿಶ್ವಜಿತ್ ಆಚಾರ್ಯ, ಕಾರ್ಯದರ್ಶಿಯಾಗಿ ಶ್ರೀ ಆಕಾಶ್ ಜಿ. ಸಾಲ್ಯಾನ್, ಕೋಶಾಧಿಕಾರಿಯಾಗಿ ಶ್ರೀ ಭೋಜಕೋಟ್ಯಾನ್, ಸಮಿತಿ ಸದಸ್ಯರಾಗಿ ಶ್ರೀ ಹಿಮಕರ್ ಕೋಟ್ಯಾನ್, ಶ್ರೀ ಮಹಮ್ಮದ್ ಶರೀಫ್, ನವೀನ್ ಚಂದ್ರ, ಶ್ರೀ ಬಶೀರ್ ಅಹ್ಮದ್ ಕಲ್ಲಾಪು ರವರನ್ನು ಆಯ್ಕೆ ಮಾಡಲಾಯಿತು.
ರೊಟೇರಿಯನ್ ಅಶೋಕ್ ಎನ್ ರವರು ಮಾತನಾಡಿ ರೋಟರಿ ಕ್ಲಬ್ ನ ಕಾರ್ಯವೈಖರಿ ಮತ್ತು ಜನಪರ ಸೇವೆಗಳ ಬಗ್ಗೆ ವಿವರಣೆಯನ್ನು ನೀಡಿದರು.
ರೋಟರಿ ಕ್ಲಬ್ ಬೈಕಂಪಾಡಿ ವತಿಯಿಂದ ಫೇಮಸ್ ಯೂತ್ ಕ್ಲಬ್ಬಿಗೆ ಐದು ಸ್ಟೀಲ್ ಟೇಬಲ್ ಗಳನ್ನು ಕೊಡುಗೆಯಾಗಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಫೇಮಸ್ ಯೂತ್ ಕ್ಲಬ್ಬಿನ ಗೌರವಾಧ್ಯಕ್ಷರಾದ ಶ್ರೀ ಗುರುರಾಜ್ ಎಸ್ ಪೂಜಾರಿ
ಅಧ್ಯಕ್ಷರಾದ ಶ್ರೀ ಸುರೇಶ್ ಬಿ ದೇವಾಡಿಗ ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾಯೋಗೀಶ್, ರೋಟರಿ ಕ್ಲಬ್ ಬೈಕಂಪಾಡಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸಂಸ್ಥೆಯ ಹಿರಿಯ ಮಾರ್ಗದರ್ಶಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಫೇಮಸ್ ರೋಟರಿ ಸಮುದಾಯದಳದ ಸ್ಥಾಪಕಾಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ನಿರೂಪಿಸಿದರು.

