ಉಡುಪಿ: ಓಣಂ ಹಬ್ಬದ ಸಂಭ್ರಮಕ್ಕೆ ಉಡುಪಿ ನಗರ ಸಜ್ಜಾಗಿದ್ದು, ಹಬ್ಬದ ಪ್ರಯುಕ್ತ ಉಡುಪಿಯ ವೈಟ್ ಲೋಟಸ್ ಹೋಟೆಲ್‌ನಲ್ಲಿ ವಿಶೇಷ ಓಣಂ ಸದ್ಯ ಆಯೋಜಿಸಲಾಗಿದೆ. ಆಗಸ್ಟ್ 26ರಿಂದ 30ರವರೆಗೆ ನಡೆಯುತ್ತಿರುವ ಈ ಓಣಂ ಸಂಭ್ರಮದಲ್ಲಿ ಒಟ್ಟು 26ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ಒಂದೇ ಊಟದಲ್ಲಿ ಸವಿಯಬಹುದಾಗಿದೆ.
ಕೇರಳದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಓಣಂ ಅಂದರೆ ಸಂಭ್ರಮದ ಜೊತೆಗೆ ಸಾಂಪ್ರದಾಯಿಕ ಸದ್ಯದ ಊಟವೂ ವಿಶೇಷ. ಇದೀಗ ಉಡುಪಿಯಲ್ಲಿಯೇ ಗ್ರಾಹಕರಿಗೆ ಕೇರಳ ಶೈಲಿಯ ಓಣಂ ಸದ್ಯದ ಸವಿಯನ್ನು ನೀಡಲು ವೈಟ್ ಲೋಟಸ್ ಹೋಟೆಲ್ ಮುಂದಾಗಿದೆ.
ಬಾಳೆ ಎಲೆಯಲ್ಲಿ ಬಡಿಸಲಾಗುವ ಈ ವಿಶೇಷ ಸದ್ಯದಲ್ಲಿ ಉಪ್ಪು, ಉಪ್ಪಿನಕಾಯಿ, ಪಾಪಡ್, ಬಾಳೆಹಣ್ಣು, ಪಚ್ಚಡಿ, ಇಂಜಿಪುಳಿ, ಬಾಳೆ ಚಿಪ್ಸ್, ಅವಿಯಲ್, ರೈಸ್, ಸಾಂಬಾರ್, ರಸಂ, ಪಾಯಸ, ಹೋಳಿಗೆ, ಮಜ್ಜಿಗೆ ಸೇರಿದಂತೆ ಹಲವು ಬಗೆಯ ಸಾಂಪ್ರದಾಯಿಕ ಖಾದ್ಯಗಳು ಇರಲಿವೆ.
ಒಟ್ಟು 26 ಬಗೆಯ ಖಾದ್ಯಗಳನ್ನು ಒಳಗೊಂಡ ಓಣಂ ಸದ್ಯಕ್ಕೆ 369 ರೂಪಾಯಿ ದರ ನಿಗದಿಪಡಿಸಲಾಗಿದೆ. ಆಗಸ್ಟ್ 26ರಿಂದ 30ರವರೆಗೆ ಈ ವಿಶೇಷ ಓಣಂ ಸದ್ಯ ಲಭ್ಯವಿರಲಿದೆ.
ಉಡುಪಿಯ ಮಾರುತಿ ವೀಥಿಕಾ ರಸ್ತೆಯ ಗ್ರೀನ್ ಪಾರ್ಕ್ ಪ್ರೀಮಿಯರ್‌ನಲ್ಲಿರುವ ಹೋಟೆಲ್ ವೈಟ್ ಲೋಟಸ್‌ನಲ್ಲಿ ಈ ಓಣಂ ಸಂಭ್ರಮ ನಡೆಯುತ್ತಿದೆ.
ಒಟ್ಟಿನಲ್ಲಿ ಓಣಂ ಹಬ್ಬದ ಸಾಂಪ್ರದಾಯಿಕ ರುಚಿಯನ್ನು ಒಂದೇ ಬಾಳೆ ಎಲೆಯಲ್ಲಿ ಸವಿಯಲು ಬಯಸುವ ಉಡುಪಿಯ ಆಹಾರ ಪ್ರಿಯರಿಗೆ ವೈಟ್ ಲೋಟಸ್ ಹೋಟೆಲ್ ವಿಶೇಷ ಓಣಂ ಸದ್ಯದ ಮೂಲಕ ಹಬ್ಬದ ಸವಿಯನ್ನು ಉಣಬಡಿಸುತ್ತಿದೆ.


