Home Archive by category udupi

ಕೆದಿಂಜೆ : 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೆದಿಂಜೆ-ಮಂಜರಪಲ್ಕೆಇದರ 14 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಕೆದಿಂಜೆ ಶ್ರೀ ವಿಠೋಭ ಭಜನಾ ಮಂದಿರದಲ್ಲಿ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ಭಟ್, ಅಧ್ಯಕ್ಷರಾದ ಸುಧಾಕರ ಸಾಲ್ಯಾನ್ ಕಾರ್ಯದರ್ಶಿ ದಯಾನಂದ ಆಚಾರ್ಯ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

ಶಿರ್ವ : 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಿರ್ವ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶಿರ್ವ – ಮಂಚಕಲ್ ಬಸ್ ನಿಲ್ದಾಣ ಬಳಿಯ ವೇದಿಕೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಜರುಗಿತು. ಆ ಪ್ರಯುಕ್ತ ಮೂರು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವಿಠಲ ಬಿ. ಅಂಚನ್ ಉಪಾಧ್ಯಕ್ಷರಾದ ಗೋವಿಂದ ಜಿ. ಕುಂದರ್, ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ, ಜತೆ

ಪಲಿಮಾರು : 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಲಿಮಾರು ಇದರ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಫಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀ ಗಣೇಶ ಮಂಟಪದಲ್ಲಿ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಕರುಣಾಕರ ಶೆಟ್ಟಿ , ಅಧ್ಯಕ್ಷರಾದ ಯೊಗೀಶ್ ಕೆ.ಸುವರ್ಣ ಉಪಾಧ್ಯಕ್ಷರಾದ ಭವಾನಿ ಶಂಕರ್ ರಾವ್ ಫಲಿಮಾರು, ಚಂದ್ರಶೇಖರ್ ಶೆಟ್ಟಿ ಕರ್ನಿರೆ, ಹರೀಶ್ ಶೆಟ್ಟಿ ನಂದಿಮನೆ, ದಿನೇಶ್ ಫಲಿಮಾರು, ಜಗದೀಶ್ ಪಾವಂಜೆ ಫಲಿಮಾರು, ಗೌರವ

ಉಡುಪಿ : ಕನ್ನರ್ಪಾಡಿ ಕಿನ್ನಿಮೂಲ್ಕಿ 19 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕನ್ನರ್ಪಾಡಿ ಕಿನ್ನಿಮೂಲ್ಕಿ ಉಡುಪಿ ಇದರ 19 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸ್ವಾಗತ ಗೋಪುರ ಬಳಿಯ ಗಣಪತಿ ಮೈದಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಪ್ರಭಾಶಂಕರ್ ಪದ್ಮಶಾಲಿ ಕಿನ್ನಿಮೂಲ್ಕಿ, ಅಧ್ಯಕ್ಷರಾದ ನಾರಾಯಣ ರಾವ್ ಕನ್ನರ್ಪಾಡಿ, ಕಾರ್ಯಾಧ್ಯಕ್ಷ ಸಂಜೀವ ಎ, ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ,

ಕಟಪಾಡಿ : 40ನೇ ವರ್ಷದ ಕಟಪಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ

ಕಟಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 40ನೇಯ ಕಟಪಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವವು ವೇದಮೂರ್ತಿ ಶ್ರೀ ಪುರುಷೋತ್ತಮ ಆಚಾರ್ಯ ಅಗಳಿಮಠ ಇವರ ಪೌರೋಹಿತ್ಯದಲ್ಲಿ ಜರುಗಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕಟಪಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾದಡಾ| ಎ. ರವೀಂದ್ರನಾಥ ಶೆಟ್ಟಿ,ಶ್ರೀ ನಾರಾಯಣ ಭಟ್ ಅರ್ಚಕರು,ಅಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿ, ಕೋಶಾಧಿಕಾರಿ ಶ್ರೀ ಕಾಮ್ ರಾಜ್ ಸುವರ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಮಹೇಶ್

ಬೈಂದೂರು: ಆ.25 ರಂದು “ಕೆಸರಲ್ಲೊಂದು ದಿನ -ಗಮ್ಮತ್ತ್

ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ . ಈ ಭಾರಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ “ಕೆಸರಲ್ಲೊಂದು ದಿನ -ಗಮ್ಮತ್ತ ಕಾರ್ಯಕ್ರಮ ಅಗಸ್ಟ್ 25ರ ಭಾನುವಾರ ಬೆಳಿಗ್ಗೆ 9 ರಿಂದ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಅದರ ಪಕ್ಕದ ಜೆ.ಎನ್.ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ

ರಾಷ್ಟೀಯ ಬಿಲ್ಲವ- ಈಡಿಗ ನಾಮಧಾರಿ ಧೀವರ ಮಹಾಮಂಡಳಿ ವತಿಯಿಂದ ಆನ್ ಲೈನ್ ಭಾಷಣ ಸ್ಪರ್ಧೆ

ರಾಷ್ಟೀಯ ಬಿಲ್ಲವ- ಈಡಿಗ ನಾಮಧಾರಿ ಧೀವರ ಮಹಾಮಂಡಳಿ (ರಿ)ಉಡುಪಿ ಜಿಲ್ಲೆ ಇದರ ವತಿಯಿಂದ ನಾರಾಯಣ  ಗುರುಗಳ ಸಂದೇಶ ನಿನ್ನೆ – ಇಂದು – ನಾಳೆ ಎಂಬ ವಿಷಯದ ಬಗ್ಗೆ ಹತ್ತನೇ ತರಗತಿಯಿಂದ ಪದವಿ ವರೆಗಿನ ವಿದ್ಯಾರ್ಥಿಗಳಿಗಾಗಿ ಅನ್ ಲೈನ್ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಜೇತರಿಗೆ – ಪ್ರಥಮ  :  5,000 & ಪ್ರಶಸ್ತಿ ಪತ್ರ, ದ್ವೀತಿಯ : 3,000 & ಪ್ರಶಸ್ತಿ ಪತ್ರ, ತೃತೀಯ : 2,000 & ಪ್ರಶಸ್ತಿ ಪತ್ರ ನೀಡಲಾಗುವುದು. ಭಾಷಣ

ಪ್ರಸಾದ್ ನೇತ್ರಾಲಯದಲ್ಲಿ ಸ್ವಾತಂತ್ರೋತ್ಸವ ಆಚರಣೆ

ಉಡುಪಿಯ ಪ್ರಸಿದ್ದ ಪ್ರಸಾದ್ ನೇತ್ರಾಲಯದಲ್ಲಿ ಸಂಭ್ರಮದಿಂದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣವನ್ನು ಮಾಡಿದ ಉಡುಪಿಯ ಖ್ಯಾತ ವೈದ್ಯರಾದ ಡಾ.ವೈ.ಎಸ್. ರಾವ್ ರವರು ಮಾತನಾಡಿ ಸ್ವಾತಂತ್ರ್ಯ ಗಳಿಸಲು ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ನೆನೆಯುತ್ತಾ ಅಂದಿನಿಂದ ಇಂದಿನವರೆಗೆ ದೇಶ ಬೆಳೆದು ಬಂದ ವಿವಿಧ ಹಂತಗಳನ್ನು ತಿಳಿಸಿ, ಬಲಿಷ್ಠ ಭಾರತವನ್ನು ಕಟ್ಟಲು ನಾವೆಲ್ಲರೂ ಪ್ರಯತ್ನಿಸೋಣ ಎಂದರು. ಕಾರ್ಯಕ್ರಮದ

ಉಡುಪಿ: ಉಪತಹಸೀಲ್ದಾರ್ ಅಶ್ವಥ್ ಪಡುಬಿದ್ರಿ ನಿಧನ

ಉಡುಪಿ: ಉಡುಪಿ ತಾಲೂಕು ಕಚೇರಿಯಲ್ಲಿ ಉಪತಹಸೀಲ್ದಾ‌ರ್ ಅಶ್ವಥ್ ಪಡುಬಿದ್ರಿ(41) ಅಲ್ಪಕಾಲದ ಅಸೌಖ್ಯದಿಂದ ಇಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಇವರು ಕುಂದಾಪುರ, ಶೃಂಗೇರಿ, ಉಡುಪಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿರುವ ಇವರು, ಇಬ್ಬರು ಸಹೋದರಿ, ತಾಯಿ, ಅಜ್ಜಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಉಡುಪಿ : ಪತ್ರಕರ್ತರ ಸಂಘದಿಂದ ‘ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ’ ಚರ್ಚಾ ಕಾರ್ಯಕ್ರಮ

ಉಡುಪಿ : ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಅದರ ತಪ್ಪಲಿನಲ್ಲಿ ಭೂಕುಸಿತ ದುರಂತಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಮುಖ್ಯ ಕಾರಣ ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟಗಳ ಮೇಲೆ ಹೆಚ್ಚುತ್ತಿರುವ ಯಂತ್ರಗಳ ದಾಳಿಯಾಗಿದೆ ಎಂದು ಮಣಿಪಾಲದ ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ.ಉದಯ ಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ