HomeUncategorizedಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವರಮಹಾಲಕ್ಷ್ಮಿ ಪೂಜೆಯನ್ನ ಸಡಗರ ಭಕ್ತಿ ಭಾವದಿಂದ ಆಚರಿಸಲಾಯಿತು.
ಬೆಳಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಹೊಸಳಿಗಮ್ಮ ದೈವದ ಗುಡಿಯಲ್ಲಿ ಪ್ರಾರ್ಥನೆ ಮಾಡಿ ನಂತರ ಶ್ರೀ ದೇವಳದ ಎದುರುಗಡೆ ಹರಿಯುತ್ತಿರುವ ದರ್ಪಣ ತೀರ್ಥ ನದಿ ತಟದಲ್ಲಿ ಪೂಜಾ ವಿಧಿ ವಿಧಾನಗಳನ್ನು ಪುರೋಹಿತರು ನೆರವೇರಿಸಿ ಸಂಪ್ರದಾಯದಂತೆ ದರ್ಪಣ ತೀರ್ಥ ನದಿಯಲ್ಲಿ ಬಾಗಿನ ಅರ್ಪಿಸಲಾಯಿತು.

ತದನಂತರ ಅಲ್ಲಿಂದ ಕಳಸದಲ್ಲಿ ತೀರ್ಥ ವನ್ನ ಪುರೋಹಿತರು, ಆಡಳಿತ ಮಂಡಳಿಯವರು ಕಾರ್ಯ ನಿರ್ವಹಣಾಧಿಕಾರಿ ಹಾಗೂ ಎಲ್ಲಾ ಭಕ್ತರು ಒಟ್ಟಿಗೆ ಆನೆ, ವಾಲಗದವರು, ಬಿರುದಾವಳಿಗಳೊಂದಿಗೆ ಬಂದು ಶ್ರೀ ದೇವಳದ ಶೃಂಗೇರಿ ಮಠದಲ್ಲಿ ಲಕ್ಷ್ಮಿ ಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆಯನ್ನು ಸಲ್ಲಿಸಲಾಯಿತು. ಮಧ್ಯಾಹ್ನ 11:00 ನಂತರ ಮಹಾಪೂಜೆ ಜರಗಿ ಬಂದಂತ ಎಲ್ಲ ಮಹಿಳಾ ಭಕ್ತಾದಿಗಳಿಗೆ ರವಿಕೆ,ಬಳೆ, ಅರಿಶಿನ ಕುಂಕುಮ ಹಾಗೂ ದಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು, ಕಾರ್ಯ ನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ಭಕ್ತರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments