ಮೂಡುಬಿದಿರೆ : ಅಶಕ್ತ ಹಿಂದೂ ಬಾಂಧವ್ಯ ಸೇವಾ ನಿಧಿ ಮಹಿಳಾ ಸಂಘ ಮೂಡುಬಿದಿರೆ ಇದರ ವತಿಯಿಂದ ಆಲಂಗಾರಿನ ಬಸವನಕಜೆಯ ಬಡ ಕುಟುಂಬಕ್ಕೆ ನಿಮಿ೯ಸಿರುವ “ಆಶ್ರಯ” ಮನೆಯ ಹಸ್ತಾಂತರ ಕಾಯ೯ಕ್ರಮವು ಶನಿವಾರ ನಡೆಯಿತು.
ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಸಕ್ತ ಕುಟುಂಬದ ಲಕ್ಷ್ಮೀ-ಡಾಕಯ್ಯ ದಂಪತಿಗೆ ಮನೆಯ ಕೀಯನ್ನು ಹಸ್ತಾಂತರಿಸಿ ಮಾತನಾಡಿ ಮೂಡುಬಿದಿರೆ ವ್ಯಾಪ್ತಿಯಲ್ಲಿ ಹಲವಾರು ಸೇವಾ ಸಂಸ್ಥೆಗಳು ಉತ್ತಮ ಕೆಲಸವನ್ನು ಮಾಡುತ್ತಿವೆ. ಇದೀಗ ಸೇವಾ ಮನೋಭಾವವನ್ನು ಹೊಂದಿರುವ ಮಹಿಳೆಯರು ಸೇರಿ ಅಶಕ್ತರಿಗೆ ಮನೆಯನ್ನು ನಿಮಿ೯ಸಿಕೊಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಪಡುಮಾನಾ೯ಡು ಗ್ರಾ. ಪಂ. ಮಾಜಿ ಅಧ್ಯಕ್ಷ ದಯಾನಂದ ಪೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಈ ಪ್ರದೇಶದಲ್ಲಿ ಮೊದಲು ಯಾವುದೇ ಮೂಲಭೂತ ಸೌಕಯ೯ಗಳಿರಲಿಲ್ಲ ಇದೀಗ ಪಂಚಾಯತ್ ನಿಂದಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ. ಬೇರೆ ಬೇರೆ ಕಾರಣಗಳಿಂದ ಈ ಕುಟುಂಬಕ್ಕೆ ಮನೆ ನಿಮಾ೯ಣವಾಗಿರಲಿಲ್ಲ ಆದರೆ ಮಹಿಳೆಯರ ತಂಡವು ಸೇರಿ ಸೂರೊಂದನ್ನು ನಿಮಿ೯ಸಿಕೊಡುವ ಮೂಲಕ ಗಮನ ಸೆಳೆದಿದೆ ಎಂದರು.
ಅಶಕ್ತ ಹಿಂದೂ ಬಾಂಧವ್ಯ ಸೇವಾನಿಧಿ ಮಹಿಳಾ ಸಂಘ ಮೂಡುಬಿದಿರೆ ಅಧ್ಯಕ್ಷೆ ಮುಕಾಂಬಿಕಾ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಏಳು ತಿಂಗಳ ಹಿಂದೆ ನಡೆದ ಹಿಂದೂ ಸಮಾಜೋತ್ಸವದ ಸಂದಭ೯ದಲ್ಲಿ ಪ್ರೇರಣೆ ಪಡೆದು ಈ ಮಹಿಳಾ ಸಂಘವು ಅಸ್ತಿತ್ವಕ್ಕೆ ಬಂದಿದೆ. ಹಿಂದೂ ಸಮಾಜಕ್ಕೆ ತಮ್ಮಿಂದ ಏನಾದರೂ ಸಹಾಯವಾಗಬೇಕೆಂಬ ಉದ್ದೇಶದಿಂದ ಅಸಕ್ತ ಕುಟುಂಬಕ್ಕೆ ಮನೆ ನಿಮಿ೯ಸುವ ಯೋಜನೆಯನ್ನು ಹಾಕಿಕೊಂಡು ದಾನಿಗಳ ಸಹಕಾರ ಪಡೆದು ಮನೆಯನ್ನು ನಿಮಿ೯ಸಿದ್ದೇವೆ ಎಂದರು.
ದಾನಿ ರೇಖಾ ಜಯರಾಮ್ ಶೆಟ್ಟಿ, ರೋಟರಿ ಟೆಂಪಲ್ ಟೌನ್ ನ ಮಾಜಿ ಅಧ್ಯಕ್ಷ ಪೂಣ೯ಚಂದ್ರ ಜೈನ್ ಉಪಸ್ಥಿತರಿದ್ದರು.
ಮನೆ ನಿಮಾ೯ಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.
ರೋಟರಿ ಟೆಂಪಲ್ ಟೌನ್ ನ ಮಾಜಿ ಅಧ್ಯಕ್ಷ ಹರೀಶ್ ಎಂ. ಕೆ ಕಾಯ೯ಕ್ರಮ ನಿರೂಪಿಸಿದರು. ಮಹಿಳಾ ಸಂಘದ ಕಾಯ೯ದಶಿ೯ ಶಾಂತಾ ಭಂಡಾರಿ ವಂದಿಸಿದರು.


