ಮೂಡುಬಿದಿರೆ : ಶುಕ್ರವಾರ ರಾತ್ರಿ ಗಂಟಾಲ್ಕಟ್ಟೆಯಲ್ಲಿ ಟಾಟಾ ಎ. ಸಿ ವಾಹನವೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಕಲ್ಲಬೆಟ್ಟುವಿನ ಕಾಲೇಜೊಂದರ ಮೆಸ್ ಉದ್ಯೋಗಿ ಸಂದೀಪ್ ಪೂಜಾರಿ ಚಿಕಿತ್ಸೆ ಫಲಿಸದೆ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ
ನೂರಾಳಬೆಟ್ಟುವಿನ ಶೇಖರ ಪೂಜಾರಿ ಅವರ ಪುತ್ರ ಸಂದೀಪ್ ಪೂಜಾರಿ (28ವ) ಮೃತಪಟ್ಟ ಯುವಕ. ಅವರು ಗಂಟಾಲ್ ಕಟ್ಟೆಯಲ್ಲಿ ತನ್ನ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಟಾಟಾ ಎ. ಸಿ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಹೊಂದಿದ್ದರು.


