HomeFresh Newsಮೂಡುಬಿದಿರೆಯಲ್ಲಿ ಪೊಲೀಸರ ಕಾಯ೯ಚರಣೆ : ನಿಯಮ ಉಲ್ಲಂಘಿಸಿದ 35 ವಾಹನಗಳಿಗೆ ದಂಡ

ಮೂಡುಬಿದಿರೆಯಲ್ಲಿ ಪೊಲೀಸರ ಕಾಯ೯ಚರಣೆ : ನಿಯಮ ಉಲ್ಲಂಘಿಸಿದ 35 ವಾಹನಗಳಿಗೆ ದಂಡ

ಮೂಡುಬಿದಿರೆ : ಇಲ್ಲಿನ ಪೇಟೆಯ ನೋಎಂಟ್ರಿಯಲ್ಲಿ ಬರುತ್ತಿದ್ದ, ಹೆಲ್ಮೆಟ್ ಧರಿಸದಿರುವ, ಕಕ೯ಶವಾಗಿ ಹಾರನ್ ಹಾಕಿಕೊಂಡು ಬರುತ್ತಿದ್ದ ಮತ್ತು ನಂಬರ್ ಪ್ಲೇಟ್ ಸರಿಯಿಲ್ಲದ ವಾಹನ ಸವಾರರಿಗೆ ಹೀಗೆ ಕಾನೂನು ಪಾಲಿಸದ ಒಟ್ಟು 35 ವಾಹನಗಳಿಗೆ ಮೂಡುಬಿದಿರೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆಯನ್ನು ನೀಡಿದ್ದಾರೆ.

ಎಎಸ್ಐ ಗಿರೀಶ್ ಮತ್ತು ಹೆಡ್ ಕಾನ್ಸ್ಟೇಬಲ್ ಸಂದೀಪ್ ಗೌಡ ಅವರು ಶನಿವಾರ ಮಧ್ಯಾಹ್ನ ಮತ್ತು ಸಂಜೆಯ ವೇಳೆಗೆ ಕೃಷ್ಣಕಟ್ಟೆ, ಸಮಾಜ ಮಂದಿರ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿ ಕಾಯ೯ಚರಣೆ ನಡೆಸಿದ್ದು ಪೇಟೆಯಲ್ಲಿ ಕಕ೯ಶವಾಗಿ ಹಾರನ್ ಹಾಕಿಕೊಂಡು ಬರುತ್ತಿದ್ದ 3 ಖಾಸಗಿ ಬಸ್ ಗಳ ಹಾರನ್ ಗಳನ್ನು ತೆಗೆದಿದ್ದಾರೆ. ಉಳಿದಂತೆ ಹೆಲ್ಮೆಟ್ ಧರಿಸದದವರಿಗೆ, ನೋ ಎಂಟ್ರಿಯಲ್ಲಿ ಬರುವ ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ.

ಎರಡು ದಿನಗಳ ಹಿಂದೆ ಪುರಸಭೆಯಲ್ಲಿ ಎಸಿಪಿ ಶ್ರೀಕಾಂತ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ “ನಮ್ಮ ಮೂಡುಬಿದಿರೆ ಫೋರಂ” ಯ ಅಕ್ಷಯ್ ಜೈನ್ ಅವರು ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಸಂಚಾರ ನಿಯಮದ ಉಲ್ಲಂಘನೆ, ನೋ-ಎಂಟ್ರಿ ಸಮಪ೯ಕ ನಿವ೯ಹಣೆ ಕೊರತೆ ಮತ್ತು ಹೆಲ್ಮೆಟ್ ಧರಿಸದೆ ತ್ರಿಬಲ್ ರೈಡ್ ಹೋಗುವ ಬಗ್ಗೆ ಎಸಿಪಿಯವರ ಗಮನಕ್ಕೆ ತಂದಿದ್ದರು.
ಈ ಸಂದಭ೯ ದಲ್ಲಿ ರಸ್ತೆ ಸಂಚಾರದ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಭರವಸೆಯನ್ನು ಎಸಿಪಿ ನೀಡಿದ್ದರು.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments