HomeFresh Newsಪ್ರಾದೇಶಿಕ ಬೆಳವಣಿಗೆಗೆ ಉತ್ತೇಜನ: 2,482 ಸ್ಥಳೀಯ ಬ್ಯಾಂಕ್ ಅಧಿಕಾರಿಗಳ ನೇಮಕಕ್ಕೆ ಮುಂದಾದ ಬ್ಯಾಂಕ್ ಆಫ್ ಬರೋಡಾ

ಪ್ರಾದೇಶಿಕ ಬೆಳವಣಿಗೆಗೆ ಉತ್ತೇಜನ: 2,482 ಸ್ಥಳೀಯ ಬ್ಯಾಂಕ್ ಅಧಿಕಾರಿಗಳ ನೇಮಕಕ್ಕೆ ಮುಂದಾದ ಬ್ಯಾಂಕ್ ಆಫ್ ಬರೋಡಾ

ಮಂಗಳೂರು: ತಳಮಟ್ಟದ ಬ್ಯಾಂಕಿಂಗ್ ಸೇವೆಯನ್ನು ಬಲಪಡಿಸಲು ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಗೆ ಒತ್ತು ನೀಡಲು ಬ್ಯಾಂಕ್ ಆಫ್ ಬರೋಡಾ ಬೃಹತ್ ನೇಮಕಾತಿ ಅಭಿಯಾನವನ್ನು ಪ್ರಕಟಿಸಿದೆ. ಬ್ಯಾಂಕ್ ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್-1 (JMG/S-I) ನಲ್ಲಿ ಒಟ್ಟು 2,482 ಸ್ಥಳೀಯ ಬ್ಯಾಂಕ್ ಅಧಿಕಾರಿಗಳನ್ನು (LBO) ನಿಯಮಿತ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ.

ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ ಸೇರಿದಂತೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ನೇಮಕಾತಿ ನಡೆಯಲಿದೆ.

ಈ ನೇಮಕಾತಿಯ ಪ್ರಮುಖ ವಿಶೇಷವೆಂದರೆ ರಾಜ್ಯ-ಕೇಂದ್ರಿತ ನಿಯೋಜನೆ. ಆಯ್ಕೆಯಾದ ಅಧಿಕಾರಿಗಳು ಅವರು ಅರ್ಜಿ ಸಲ್ಲಿಸಿದ ರಾಜ್ಯದಲ್ಲಿಯೇ ಮೊದಲ 12 ವರ್ಷಗಳ ಕಾಲ ಅಥವಾ SMGS-IV ಗ್ರೇಡ್‌ಗೆ ಬಡ್ತಿ ಪಡೆಯುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಸೇವೆ ಸಲ್ಲಿಸಬೇಕಾಗುತ್ತದೆ. ಇದರಿಂದ ಸ್ಥಳೀಯ ಭಾಷಾ ಪ್ರಾವೀಣ್ಯತೆ, ಸಾಂಸ್ಕೃತಿಕ ಅರಿವು ಮತ್ತು ಸ್ಥಳೀಯ ಮಾರುಕಟ್ಟೆ ಜ್ಞಾನವುಳ್ಳ ಸಿಬ್ಬಂದಿಯನ್ನು ರೂಪಿಸುವುದು ಬ್ಯಾಂಕ್‌ನ ಉದ್ದೇಶವಾಗಿದೆ.

ಈ ಕ್ರಮದಿಂದ ಗ್ರಾಹಕರೊಂದಿಗಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದ್ದು, ಸೇವಾ ಗುಣಮಟ್ಟ ಹೆಚ್ಚಲಿದೆ. ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೃತ್ತಿ ಅವಕಾಶ ದೊರೆಯಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಈ ಕುರಿತು ಮಾತನಾಡಿದ ಕಾರ್ಯನಿರ್ವಾಹಕ ನಿರ್ದೇಶಕ ಲಾಲ್ ಸಿಂಗ್, “ಈ ನೇಮಕಾತಿ ಅಭಿಯಾನವು ನಮ್ಮ ಸಿಬ್ಬಂದಿ ವರ್ಗದಲ್ಲಿನ ಹೂಡಿಕೆಯಷ್ಟೇ ಅಲ್ಲ, ನಾವು ಸೇವೆ ಸಲ್ಲಿಸುವ ಸಮುದಾಯಗಳಲ್ಲಿನ ಹೂಡಿಕೆಯೂ ಆಗಿದೆ. ಸ್ಥಳೀಯ ಅರಿವುಳ್ಳ ಯುವ ವೃತ್ತಿಪರರನ್ನು ಸೇರ್ಪಡೆಗೊಳಿಸುವ ಮೂಲಕ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವ ನಮ್ಮ ಸಾಮರ್ಥ್ಯವನ್ನು ಬಲಪಡಿಸುತ್ತಿದ್ದೇವೆ,” ಎಂದರು.

ಅರ್ಹತಾ ಮಾನದಂಡ: ಪದವೀಧರರು, ವಯೋಮಿತಿ 21 ರಿಂದ 30 ವರ್ಷ (01.08.2026ಕ್ಕೆ ಅನ್ವಯ), ನಿಗದಿತ ವಾಣಿಜ್ಯ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕನಿಷ್ಠ ಒಂದು ವರ್ಷದ ಅನುಭವ ಮತ್ತು ಅರ್ಜಿ ಸಲ್ಲಿಸಿದ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಕಡ್ಡಾಯ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 7.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments