ಸೆಪ್ಟೆಂಬರ್ 05: ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುವ ಶಿಕ್ಷಕರನ್ನು ಗೌರವಿಸುವ ಉದ್ದೇಶದಿಂದ ಮಲಬಾರ್ ಗೋಲ್ಡ್ & ಡೈಮಂಡ್ಸ್, ಮಂಗಳೂರು ಶೋರೂಮ್ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಶಿಕ್ಷಕರಾದ ಶ್ರೀ ನವೀನ್ ಶೆಟ್ಟಿ ಕೆ., ಶ್ರೀ ಪೆರ್ಮುದೆ ಮೋಹನ್ ಕುಮಾರ್, ಶ್ರೀ ಯೂಸುಫ್ ವಿಟ್ಲ, ಶ್ರೀಮತಿ ರತ್ನಾವತಿ ಜೆ. ಬೈಕಾಡಿ , ಸಿಸ್ಟರ್ ಮಾರಿಯಾ ಶ್ರುತಿ ಎ., ಹಾಗೂ ಶ್ರೀಮತಿ ವೀಣಾ ಆಗ್ನೆಸ್ ಡಿಸೋಜಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಶ್ರೀಮತಿ ರೇಖಾ ಜೆ. ಶೆಟ್ಟಿ ಅವರು, ಸಮಾಜಕ್ಕೆ ದಿಕ್ಕು ತೋರುವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಇಂತಹ ಕಾರ್ಯಕ್ರಮಗಳು ಶಿಕ್ಷಕರ ಸೇವೆಯನ್ನು ಮತ್ತಷ್ಟು ಮೆರೆಯುವಲ್ಲಿ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಇನ್ನೊರ್ವ ಮುಖ್ಯ ಅತಿಥಿ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಸಮಾಜಮುಖಿ ಚಟುವಟಿಕೆಯನ್ನು ಶ್ಲಾಘಿಸಿದರು. ಶಿಕ್ಷಕರಿಗೆ ನೀಡಿದ ಗೌರವವು ಶಿಕ್ಷಣ ಕ್ಷೇತ್ರದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.
ಇದೇ ವೇಳೆ ಮುಖ್ಯ ಅತಿಥಿಗಳಾದ ಶ್ರೀ ದಯಾನಂದ ಕತ್ತಲ್ ಸಾರ್ ಅವರು ಸಂಸ್ಥೆಯ ಸಿಎಸ್ಆರ್ ಚಟುವಟಿಕೆಗಳನ್ನು ಪ್ರಶಂಸಿಸಿ, ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರನ್ನು ಗೌರವಿಸಿರುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮ ಧನಂಜಯ ನಿರೂಪಿಸಿದರು. ಇದೆ ಸಂದರ್ಭದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಮಲಬಾರ್ ನ ಸಿಬ್ಬಂದಿ ಶ್ರೀಮತಿ ಪೂರ್ಣಿಮಾ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶೋರೂಮ್ನ ಸ್ಟೋರ್ ಹೆಡ್ ಹಫೀಜ್ ರೆಹಮಾನ್, ಅಸಿಸ್ಟೆಂಟ್ ಸ್ಟೋರ್ ಹೆಡ್ ನಝರ್ ಅಹಮ್ಮದ್ ಪಿ.ಪಿ., ಶೋರೂಮ್ ಮ್ಯಾನೇಜರ್ ರಘುರಾಮ್ ಸಿ.ಎಸ್., ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

