ಮೂಡುಬಿದಿರೆಯ ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹ ಒಂದೇ ಸೂರಿನಡಿ ಸಿಗಲಿದೆ. ’ಫಿದಾ ಫರ್ನಿಚರ್, ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಸೊಲ್ಯೂಷನ್ಸ್’ ಸಂಸ್ಥೆಯ ನೂತನ ಶೋರೂಂ ಮೂಡುಬಿದಿರೆಯಲ್ಲಿ ಅದ್ದೂರಿಯಾಗಿ ಶುಭಾರಂಭಗೊಂಡಿತು.

ಮೂಡುಬಿದಿರೆಯ ವಿದ್ಯಾ ಗಿರಿಯಲ್ಲಿರುವ ’ಫಿದಾ ಫರ್ನಿಚರ್, ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಸೊಲ್ಯೂಷನ್ಸ್’ ಸಂಸ್ಥೆಯ ಹೊಸ ಶೋರೂಂನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.





ಮಲಿಜಾ ಎಜುಕೇಶನ್ ಅಂಡ್ ಚಾರಿಟಿ ಸೆಂಟರ್ ಅಧ್ಯಕ್ಷರಾದ ಸಯ್ಯದ್ ಅಲವಿ ಜಲಾಲುದ್ದೀನ್ ಅಲ್ ಹಾಜಿ ಉಜಿರೆ ಹಾಗೂ ಅಬ್ದುರಹಿಮಾನ್ ಮುಸ್ಲಿಯಾರ್ ಪಿ. ವಜಯೂರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಮೂಡುಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಅತಿಥಿಯಾಗಿ ಆಗಮಿಸಿದ್ದರು.
ಗ್ರಾಹಕರಿಗೆ ಅತ್ಯಾಕರ್ಷಕ ಫರ್ನಿಚರ್, ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಸೊಲ್ಯೂಷನ್ಸ್ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.

