HomeFresh Newsಮುಳುಗಿದ ಪ್ರಯಾಣಿಕರ ಹಡಗು: ನಾಪತ್ತೆಯಾಗಿರುವ 140 ಪ್ರಯಾಣಿಕರಿಗಾಗಿ ಮುಂದುವರಿದ ಶೋಧ ಕಾರ್ಯ

ಮುಳುಗಿದ ಪ್ರಯಾಣಿಕರ ಹಡಗು: ನಾಪತ್ತೆಯಾಗಿರುವ 140 ಪ್ರಯಾಣಿಕರಿಗಾಗಿ ಮುಂದುವರಿದ ಶೋಧ ಕಾರ್ಯ

ಜಕಾರ್ತಾ:ಪ್ರತಿಕೂಲ ಹವಾಮಾನದಿಂದಾಗಿ ರವಿವಾರ ಜಾವಾ ಸಮುದ್ರದಲ್ಲಿ ಸುಮಾರು 240ಕ್ಕೂ ಹೆಚ್ಚು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ಹಡಗೊಂದು ನೀರಿನಲ್ಲಿ ಮುಳುಗಿದ್ದು, ಪ್ರಯಾಣಿಕರು ಹಾಗೂ ಹಡಗಿನ ಸಿಬ್ಬಂದಿಗಳು ಸೇರಿದಂತೆ ಸುಮಾರು 140 ಮಂದಿ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಇಂಡೋನೇಶ್ಯಾ ರಕ್ಷಣಾ ಸಿಬ್ಬಂದಿಗಳು ತಿಳಿಸಿದ್ದಾರೆ.

ಹಡಗು ಕಡೆಯದಾಗಿ ಕಂಡು ಬಂದಿದ್ದ ಸ್ಥಳದ ಸುತ್ತಮುತ್ತ ನಡೆದ ಶೋಧ ಕಾರ್ಯಾಚರಣೆಯಲ್ಲಿ ಕನಿಷ್ಠ 102 ಮಂದಿಯನ್ನು ರಕ್ಷಿಸಲಾಗಿದ್ದು, ಓರ್ವ ಪ್ರಯಾಣಿಕನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಯಾಣಿಕರ ಹಡಗು ಪೂರ್ವ ಜಾವಾದಿಂದ ದಕ್ಷಿಣ ಕಲಿಮಂಟನ್ ಪ್ರಾಂತ್ಯದತ್ತ ಪ್ರಯಾಣ ಬೆಳೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮುದ್ರ ಪ್ರಕ್ಷುಬ್ಧವಾಗಿದ್ದು, ಸುಮಾರು 10 ಅಡಿ ಎತ್ತರದವರೆಗೆ ಅಲೆಗಳು ಅಪ್ಪಳಿಸುತ್ತಿರುವುದರಿಂದ, ಹಡಗು ಮುಳುಗುತ್ತಿದೆ ಎಂದು ಹಡಗಿನ ಕ್ಯಾಪ್ಟನ್ ಇದಕ್ಕೂ ಮುನ್ನ ಸಂದೇಶ ರವಾನಿಸಿದ್ದರು ಎಂದು ಸುದಯಾನಾ ಹೇಳಿದ್ದಾರೆ. ಬಳಿಕ, ಹಡಗು ಮಗುಚಿಕೊಂಡಿದೆ ಎಂಬ ಮಾಹಿತಿಯನ್ನು ಸ್ವೀಕರಿಸಲಾಯಿತು ಎಂದು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಕಚೇರಿಯ ನೇತೃತ್ವ ವಹಿಸಿರುವ ಐ.ಪುಟು ಸುದಯಾನಾ ತಿಳಿಸಿದ್ದಾರೆ.

ಫಿಲಿಪ್ಫೈನ್ಸ್ ಪ್ರಯಾಣಿಕರ ಹಡಗಿನಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 76 ಮಂದಿ ಮೃತಪಟ್ಟ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಈ ಅಪಘಾತ ಸಂಭವಿಸಿದೆ. ಫಿಲಿಪ್ಪೈನ್ಸ್ ನಲ್ಲಿ ಸಂಭವಿಸಿದ ಹಡಗು ದುರಂತದಲ್ಲಿ ಈಗಲೂ 10 ಮಂದಿ ನಾಪತ್ತೆಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments