HomeFresh Newsಸಹಕಾರಿ ರಂಗದಲ್ಲಿ ಪ್ರಿಯದರ್ಶಿನಿಯ ಹೆಜ್ಜೆ ಸುದೃಢವಾಗಿದೆ: ವಿಶ್ವಾಸ್ ವಿ. ಅಮೀನ್

ಸಹಕಾರಿ ರಂಗದಲ್ಲಿ ಪ್ರಿಯದರ್ಶಿನಿಯ ಹೆಜ್ಜೆ ಸುದೃಢವಾಗಿದೆ: ವಿಶ್ವಾಸ್ ವಿ. ಅಮೀನ್

ಪಡುಬಿದ್ರಿ: ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಪಡುಬಿದ್ರಿ ಶಾಖೆಯು ಪ್ರಾರಂಭವಾದ ದಿನದಿಂದಲೂ ಗ್ರಾಮಸ್ಥರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದ್ದು, ಸಹಕಾರಿ ರಂಗದಲ್ಲಿ ಸಂಸ್ಥೆಯು ಸುದೃಢ ಹೆಜ್ಜೆಗಳನ್ನಿಟ್ಟು ಮುನ್ನಡೆಯುತ್ತಿದೆ. ಸೊಸೈಟಿಯು ಇನ್ನಷ್ಟು ಅಭಿವೃದ್ಧಿ ಹೊಂದಲಿ. ಸಂಸ್ಥೆಯ ಏಳಿಗೆಗೆ ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿಯ ಜಿಲ್ಲಾಧ್ಯಕ್ಷರಾದ ವಿಶ್ವಾಸ್ ವಿ. ಅಮೀನ್ ಹೇಳಿದರು. ಅವರು ಪ್ರಿಯದರ್ಶಿನಿ ಸೊಸೈಟಿಯ ಪಡುಬಿದ್ರಿ ಶಾಖೆಯಲ್ಲಿ ನಡೆದ ಸಹಕಾರ ಸಪ್ತಾಹ 2026ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪಡುಬಿದ್ರಿ ಶಾಖೆಯ ನಿವೃತ್ತ ಪ್ರಬಂಧಕರಾದ ಪ್ರಬೋಧ್ ಚಂದ್ರ ಹೆಜಮಾಡಿ ಅವರು ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ವೈ.ಜಿ. ರಸೂಲ್, ನಿವೃತ್ತ ಹಿರಿಯ ಲೆಕ್ಕಪರಿಶೋಧಕರು, ಸಹಾಯಕ ನಿರ್ದೇಶಕರ ಕಚೇರಿ, ಕುಂದಾಪುರ; ವಾಸುದೇವ ದೇವಾಡಿಗ, ನಿರ್ದೇಶಕರು, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ. ಪಡುಬಿದ್ರಿ; ಹಾಗೂ ಶ್ರೀನಿವಾಸ ಭಟ್ ಎಚ್.ಎಸ್., ನಿವೃತ್ತ ಶಾಖಾ ವ್ಯವಸ್ಥಾಪಕರು, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ. ಪಡುಬಿದ್ರಿ ಇವರನ್ನು ಸೊಸೈಟಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ಹಳೆಯಂಗಡಿಯ ಉಪಾಧ್ಯಕ್ಷರಾದ ವಿಜಯಕುಮಾರ್ ಸನಿಲ್ ವಹಿಸಿದ್ದರು.ಸೊಸೈಟಿಯ ನಿರ್ದೇಶಕರಾದ ಧನಂಜಯ ಮಟ್ಟು ಹಾಗೂ ಗಣೇಶ್ ಪ್ರಸಾದ್ ದೇವಾಡಿಗ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಸ್ವಾಗತಿಸಿದರು. ಪಡುಬಿದ್ರಿ ಶಾಖಾ ಪ್ರಬಂಧಕಿ ಅಂಜಲಿ ಉಳ್ಳಾಲ್ ಎಸ್. ವಂದಿಸಿದರು. ಲೆಕ್ಕಿಗರಾದ ಲೋಲಾಕ್ಷಿ ಉಪಸ್ಥಿತರಿದ್ದರು.

Swarna jewellery - 4
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments