ಸುಳ್ಯ ತಾಲೂಕಿನ ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಶಾರದಾಂಬ ಭಜನಾ ಮಂಡಳಿ ಕೋಲ್ಚಾರು ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಲ್ಚಾರು ವತಿಯಿಂದ ಈ ಬಾರಿ 30ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸ ವಿಜೃಂಭಣೆಯಿಂದ ನಡೆಯಿತು. ಬ್ರಹ್ಮಶ್ರೀ ವೇದವ್ಯಾಸ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ತಾಂತ್ರಿಕ ವೈದಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರುಗಳಾದ ಅಪ್ಪಯ್ಯ ಮಡಿವಾಳ ಕುಂಭಕೋಡು, ದರ್ಶನಕಾರರಾದ ಕುಂಞಕಣ್ಣ ಬೆಳ್ಚಪ್ಪಾಡ ಪರಮಂಡಲ, ದೈವ ನರ್ತಕರಾದ ಕುಂಞಕಣ್ಣ ವಣ್ಣನ್ ಕೋಲ್ಚಾರು ಅವರನ್ನು ಸನ್ಮಾನಿಸಲಾಯಿತು.


ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜಕ್ಕೆ ವಿಶೇಷ ಕೊಡುಗೆಯನ್ನು ನೀಡುತ್ತಿರುವ ಮತ್ತು ಕೋಲ್ಚಾರು ಮತಗಟ್ಟೆ ಸಂಖ್ಯೆ 204ರ ಮತಗಟ್ಟೆ ಅಧಿಕಾರಿ ಕೋಲ್ಚಾರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರತ್ನಾವತಿ ಜನಾರ್ಧನ ವಾಲ್ತಾಜೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಶೈಕ್ಷಣಿಕ ವರ್ಷದಲ್ಲಿ ಡಿಸ್ಟಿಂಕ್ಷನ್ ಪಡೆದ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಶ್ರೀಮತಿ ಅನನ್ಯ ತೇಜಸ್ ಕೊಯಿಂಗಾಜೆ ಪ್ರಾರ್ಥಿಸಿ ದರು. ಗಣೇಶೋತ್ಸವ ಸಮಿತಿಯ ಸ್ಥಾಪಾಕಾಧ್ಯಕ್ಷ ಪುರುಷೋತ್ತಮ ಕೋಲ್ಚಾರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಮುಖ್ಯ ಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ ಸನ್ಮಾನ ಪತ್ರ ವಾಚಿಸಿದರು. ಪ್ರಾಂಶುಪಾಲರಾದ ಸತೀಶ್ ಕೊಯಂಗಾಜೆ ಯವರು ಕಾರ್ಯಕ್ರಮ ನಿರ್ವಹಿಸಿದರು.
ನಂತರ ಮಹಿಳೆಯರಿಂದ ಕುಣಿತ ಭಜನೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಧಾರ್ಮಿಕ ಸಭೆಯು ಗಣೇಶೋತ್ಸವ ಸಮಿತಿ ಅಧ್ಯಕ್ಷ ಯತೀಶ್ ಬಳ್ಯಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ನಿವೃತ್ತ ಮ್ಯಾನೇಜರ್ ಎಂ ಜನಾರ್ಧನ ನಾಯ್ಕ್ ಕೇರ್ಪಳ ರವರು ದೀಪ ಪ್ರಜ್ವಲಿಸಿದರು. ಸಾಮಾಜಿಕ ಕಾರ್ಯಕರ್ತರು, ಸಂಘಟಕರಾಗಿರುವ ಗಣರಾಜ ಭಟ್ ಕೆದಿಲ ರವರು ಧಾರ್ಮಿಕ ಉಪನ್ಯಾಸ ನೀಡಿದರು. ಶಾರದಾಂಬ ಭಜನಾ ಮಂದಿರದ ಅಧ್ಯಕ್ಷ ಪ್ರದೀಪ್ ಕೊಲ್ಲರಮೂಲೆ, ನಿವೃತ್ತ ಶಿಕ್ಷಕ ಕೊರಗಪ್ಪ ಮಾಸ್ತರ್ ಕಣಕ್ಕೂರು, ಬಾಲಕೃಷ್ಣ ಮಣಿಯಾಣಿ ಹಾಸ್ಪಾರೆ, ಶ್ರೀಮತಿ ರತ್ನಾವತಿ ವಾಲ್ತಾಜೆ, ರಂಗಪ್ಪ ನಾಯ್ಕ ಕುಡೆಂಬಿ, ಐತ್ತಪ್ಪ ನಾಯ್ಕ್ ಕುಂಭಕೋಡು, ವೀರಪ್ಪ ಗೌಡ ಕೊಯಿಂಗಾಜೆ, ಕೊರಗಪ್ಪ ಮಣಿಯಾಣಿ ಕಣಕ್ಕೂರು, ಚೇರ್ ಪೊಡಿಯ ಪೈಂಬೆಚ್ಚಾಲ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

