ಉಚ್ಚಿಲ: ಉಚ್ಚಿಲ ಶ್ರೀ ಬಬ್ಬು ಸ್ವಾಮಿ ಬಬ್ಬು ಸ್ವಾಮಿ ದೇವಸ್ಥಾನಕ್ಕೆ ಶ್ರೀ ಅಯ್ಯಪ್ಪ ಭಕ್ತವೃಂದದಿಂದ ಸುಮಾರು 85 ಸಾವಿರ ರೂ ವೆಚ್ಚದ ಶುದ್ಧ ನೀರಿನ ಘಟಕವನ್ನು ಕೊಡುಗೆ ನೀಡಿದ್ದಾರೆ.
ಶುದ್ಧ ನೀರಿನ ಘಟಕವನ್ನು ದೈವಸ್ಥಾನದ ಮುಖ್ಯಸ್ಥರಾದ ಜಗನ್ನಾಥ ಉಚ್ಚಿಲರವರು ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ, ಉಚ್ಚಿಲ ಶ್ರೀ ಬಬ್ಬು ಸ್ವಾಮಿ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಶ್ರೀ ಅಯ್ಯಪ್ಪ ಭಕ್ತವೃಂದ ಸದಸ್ಯರು ಹೆಚ್ಚಿನ ಸಹಕಾರವನ್ನು ನೀಡುತ್ತಾ ಬರುತ್ತಿದ್ದಾರೆ. ಇನ್ನಷ್ಟು ಸೇವೆ ಅವರಿಂದ ಶ್ರೀ ದೇವರಿಗೆ ಸಿಗವಂತಾಗಲಿ. ಭಕ್ತವೃಂದದ ಸದಸ್ಯರೆಲ್ಲರಿಗೂ ಬಬ್ಬು ಸ್ವಾಮಿ ಆಯುಷ್ಯಾರೋಗ್ಯ ನೀಡಲಿ ಎಂದು ಹರಸಿದರು.
ಈ ಸಂದರ್ಭ ದೇವಸ್ಥಾನದ ಪೂಜಾ ಮುಖಾರಿ ಬೋಜ ಉಚ್ಚಿಲ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶ್ಯಾಮಲಾ, ದರ್ಶನ ಪಾತ್ರಿ ರಮೇಶ್ ಎರ್ಮಾಳು, ಅಯ್ಯಪ್ಪ ಸ್ವಾಮಿ ಭಕ್ತವೃಂದದ ಗುರುಸ್ವಾಮಿ ಅಶೋಕ ಕರ್ಕೇರ ಉಚ್ಚಿಲ, ಸಮಿತಿಯ ಅಧ್ಯಕ್ಷ ಕೃಷ್ಣಕುಮಾರ್ ಪೊಲ್ಯ, ಲವ ಶೆಟ್ಟಿ, ಹಿತೇಶ್, ಮಹೇಶ್, ರಾಜೇಶ್, ಸುರೇಂದ್ರ, ಶರತ್ ಅಯ್ಯಂಗಾರ್ ಬೇಕರಿ, ಹಾಗೂ ಮನೋಹರ್ ಎಸ್ ಎಂ ಟೈಲರ್ ಉಚ್ಚಿಲರವರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.


