HomeFresh Newsಈಜು ಸ್ಪರ್ಧೆಯಲ್ಲಿ ಸರಣಿ ಗೆಲವು :ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆ ವಿದ್ಯಾರ್ಥಿ ಆದ್ವಿಕ್...

ಈಜು ಸ್ಪರ್ಧೆಯಲ್ಲಿ ಸರಣಿ ಗೆಲವು :ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆ ವಿದ್ಯಾರ್ಥಿ ಆದ್ವಿಕ್ ಬಾಗ್ಚಿ

ಮಂಗಳೂರು: ಈಜು ಸ್ಪರ್ಧೆಯಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾ.ಅದ್ವಿಕ್ ಬಾಗ್ಚಿ ಸಾಧನೆಗಳನ್ನು ಸಾಧಿಸಿ ಹಲವು ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಪುಣೆಯಲ್ಲಿ ಜರಗಲಿರುವ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.

200 ಮೀಟರ್ ಬಿನ್ಸ್ ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ, 50 ಮೀಟರ್ ಅಫ್ನಿಯಾದಲ್ಲಿ ಬೆಳ್ಳಿ ಪದಕ ಹಾಗೂ 100 ಮೀಟರ್ ಬೈಫಿನ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಈ ಸಾಧನೆಯ ಜೊತೆಗೆ ಮಾ.ಅದ್ವಿಕ್ ಬಾಗ್ಚಿ ಅವರು ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದು, ಮುಂದಿನ ಸ್ಪರ್ಧೆ ಪುಣೆಯಲ್ಲಿ ನಡೆಯಲಿದೆ. ಮಾ.ಅದ್ವಿಕ್ ಬಾಗ್ಚಿ ಅವರ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ ಅಲ್ಮೇಡಾ ಎಸ್.ಜೆ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments