HomeFresh Newsತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟ - ಪ್ರೊ.ಬಿ.ಶಿವರಾಮ ಶೆಟ್ಟಿ, ಕುಡ್ಡು ಕೊರಗ...

ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟ – ಪ್ರೊ.ಬಿ.ಶಿವರಾಮ ಶೆಟ್ಟಿ, ಕುಡ್ಡು ಕೊರಗ , ಉಷಾ ಭಂಡಾರಿ, ಕೆ.ಪಿ.ರಾವ್ , ನೇಮು ಪರವ, ಸುಧಾಕರ ಬನ್ನಂಜೆ ಆಯ್ಕೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2025 ಹಾಗೂ 2026 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

2025ನೇ ಸಾಲಿನ ಗೌರವ ಪ್ರಶಸ್ತಿಗೆ ಪ್ರೊ.ಬಿ.ಶಿವರಾಮ ಶೆಟ್ಟಿ (ಸಾಹಿತ್ಯ/ಸಂಶೋಧನೆ), ಕುಡ್ಡು ಕೊರಗ(ಜಾನಪದ), ಶ್ರೀಮತಿ ಉಷಾ ಭಂಡಾರಿ ಬೆಂಗಳೂರು (ನಾಟಕ/ಸಿನಿಮಾ) ಅವರು ಆಯ್ಕೆಯಾಗಿದ್ದಾರೆ.

2026ನೇ ಸಾಲಿನ ಗೌರವ ಪ್ರಶಸ್ತಿಗೆ ಕೆ.ಪಿ.ರಾವ್ (ಸಾಹಿತ್ಯ/ಸಂಶೋಧನೆ), ನೇಮು ಪರವ (ಜಾನಪದ), ಸುಧಾಕರ ಬನ್ನಂಜೆ ಬೆಂಗಳೂರು (ನಾಟಕ/ಸಿನಿಮಾ) ಅವರು ಆಯ್ಕೆಯಾಗಿದ್ದಾರೆ.

ಗೌರವ ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 04 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

swarna sep
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments