ನಾಗೋಯಾ: ಏಷ್ಯನ್ ಗೇಮ್ಸ್ನ ಪುರುಷರ ಕಬಡ್ಡಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಇರಾನ್ ವಿರುದ್ಧ 40–34 ಪಾಯಿಂಟ್ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.
ಭಾರತ ಮಹಿಳೆಯರ ಮತ್ತು ಪುರುಷರ ಕಬಡ್ಡಿ ತಂಡಗಳು ಏಷ್ಯನ್ ಗೇಮ್ಸ್ನಲ್ಲಿ ಒಂದೇ ದಿನ ಚಿನ್ನದ ಪದಕದ ಭೇಟೆಯಾಡಿವೆ. ಮಹಿಳೆಯರ ತಂಡವು 37-34 ಪಾಯಿಂಟ್ಗಳ ಅಂತರದಲ್ಲಿ ಇರಾನ್ ವಿರುದ್ಧ ಗೆಲುವು ಸಾಧಿಸಿತ್ತು.
ಪುರುಷರ ಕಬಡ್ಡಿ ಫೈನಲ್ ಪಂದ್ಯವು ರೋಚಕ ಹೋರಾಟದಿಂದ ಕೂಡಿತ್ತು. ಪಂದ್ಯದ ಮೊದಲಾರ್ಧ 20–20 ಪಾಯಿಂಟ್ಗಳಿಂದ ಸಮಬಲವಾಗಿತ್ತು. ನಂತರ ಮೇಲುಗೈ ಸಾಧಿಸಿದ ಭಾರತ ತಂಡ, ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ಏಷ್ಯನ್ ಗೇಮ್ಸ್ನ ಕಬಡ್ಡಿಯಲ್ಲಿ ಭಾರತ ಪುರುಷರ ತಂಡವು 9ನೇ ಬಾರಿ ಚಿನ್ನದ ಪದಕ ಗೆದ್ದಿದೆ.

