HomeFresh Newsಪಡುಬಿದ್ರಿಯಲ್ಲಿ ‘ವಿದ್ಯಾ ಪ್ರೇರಣಾ–2026’ - 150 ವಿದ್ಯಾರ್ಥಿಗಳಿಗೆ ₹7.5 ಲಕ್ಷ ವಿದ್ಯಾರ್ಥಿವೇತನ ವಿತರಣೆ

ಪಡುಬಿದ್ರಿಯಲ್ಲಿ ‘ವಿದ್ಯಾ ಪ್ರೇರಣಾ–2026’ – 150 ವಿದ್ಯಾರ್ಥಿಗಳಿಗೆ ₹7.5 ಲಕ್ಷ ವಿದ್ಯಾರ್ಥಿವೇತನ ವಿತರಣೆ

ಪಡುಬಿದ್ರಿ: ಶಿವಾಯ ಫೌಂಡೇಶನ್ (ರಿ.) ವತಿಯಿಂದ ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ‘ವಿದ್ಯಾ ಪ್ರೇರಣಾ–2026’ ಭಾನುವಾರ ಪಡುಬಿದ್ರಿಯ ಕೃಷ್ಣ ಸುಧಾಮ ಸಭಾಂಗಣ, ಬಂಟರ ಭವನದಲ್ಲಿ ನಡೆಯಿತು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವಿದ್ಯೆಯಿಂದ ಬುದ್ಧಿ ಮತ್ತು ವಿನಯವನ್ನು ಪಡೆದು ಬದುಕನ್ನು ಅಮೃತಮಯವಾಗಿಸಬೇಕು. ವಿದ್ಯೆಯಿಂದ ಅಹಂಕಾರ ಬೆಳೆದರೆ ಅದು ಸರ್ವನಾಶದ ಸೂಚಕವಾಗುತ್ತದೆ ಎಂದರು.


ಇಂದು ಶಿಕ್ಷಣ ಸೇವೆಯಾಗದೆ ವೃತ್ತಿಯಾಗುತ್ತಿರುವುದು ವಿಷಾದನೀಯ. ಮಾನವ ಸೇವೆಯೇ ಮಾಧವ ಸೇವೆ ಎಂಬ ಮನೋಭಾವದೊಂದಿಗೆ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ನೀಡುತ್ತಿರುವ ಶಿವಾಯ ಫೌಂಡೇಶನ್‌ನ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಶಿವಾಯ ಫೌಂಡೇಶನ್‌ನ ಗೌರವಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಮಾತನಾಡಿ, ಸರಳ ಸಜ್ಜನಿಕೆಯ ಸಮಾನ ಮನಸ್ಕರು ಒಂದೇ ಕುಟುಂಬದ ಸದಸ್ಯರಂತೆ ಏಕಮನಸ್ಸಿನಿಂದ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಸಂಸ್ಥೆ ಶಿವಾಯ ಫೌಂಡೇಶನ್. ಈ ಮಹತ್ಕಾರ್ಯದಲ್ಲಿ ಗೌರವಾಧ್ಯಕ್ಷನಾಗಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಬಂಟ್ಸ್ ವೆಲ್ಫೇರ್ ಟ್ರಸ್ಟ್ ಹಾಗೂ ಬಂಟರ ಸಂಘ ಪಡುಬಿದ್ರಿಯ ಅಧ್ಯಕ್ಷ ಡಾ. ವೈ.ಎನ್. ಶೆಟ್ಟಿ ದೀಪ ಪ್ರಜ್ವಲನೆ ನೆರವೇರಿಸಿ ಮಾತನಾಡಿ, ಅನ್ನದಾನ, ಜಲದಾನ ಹಾಗೂ ವಸ್ತ್ರದಾನದಂತಹ ಸೇವಾ ಕಾರ್ಯಗಳಲ್ಲಿ ಶಿವಾಯ ಫೌಂಡೇಶನ್ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು. ಬದುಕಿನ ಸಾರ್ಥಕತೆಯಲ್ಲಿ ಹಣ, ಯಶಸ್ಸು ಮತ್ತು ಪುಣ್ಯದ ಜೊತೆಗೆ ದಾನವೂ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಬಿ. ವಿಠ್ಠಲ ಶೆಟ್ಟಿ ಮತ್ತು ಪಡುಬಿದ್ರಿಯ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ದಂಪತಿ, ಹಾಗೂ ಶಿವಾಯ ಫೌಂಡೇಶನ್ ಗೌರವಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಹಾಯ, ವೈದ್ಯಕೀಯ ವೆಚ್ಚ ಮತ್ತು ಸುಮಾರು 150 ವಿದ್ಯಾರ್ಥಿಗಳಿಗೆ 7.5 ಲಕ್ಷ ರೂ. ವಿದ್ಯಾರ್ಥಿ ವೇತನಾ ವಿತರಣೆಯು ಜರಗಿತು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಶೈಕ್ಷಣಿಕ ಸಹಾಯವನ್ನೂ ನೀಡಲಾಯಿತು.

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಮುಖ್ಯ ಅತಿಥಿಯಾಗಿ ಯಥಾರ್ಥ್ ಸಂಸ್ಥಾಪಕ ಈಶ್ವರ್ ಶೆಟ್ಟಿ ವಿಶೇಷ ಅತಿಥಿಯಾಗಿ
ಮಾಜಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ,
ಮಾಜಿ ಗ್ರಾ.ಪಂ.ಸದಸ್ಯ ನವೀನ್ ಎನ್. ಶೆಟ್ಟಿ, ಕೆರಮ ಮಾಗಂದಡಿ ವಿದ್ಯಾಧರ ಶೆಟ್ಟಿ, ಸದಾನಂದ ಪೂಜಾರಿ, ಗಾಯತ್ರಿ ಪ್ರಭು, ವಿದ್ಯಾಧರ ಶೆಟ್ಟಿ, ಉದ್ಯಮಿ ಬಾಲಚಂದ್ರ ಶೆಟ್ಟಿ ಪುಚ್ಚೊಟ್ಟು ಬೀಡು ಎರ್ಮಾಳು, ಪ್ರೇಮಾನಂದ ಶೆಟ್ಟಿ, ಅನಿಲ್ ಶೆಟ್ಟಿ, ಹರೀಶ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ರಾಯೇಶ್ ಪೈ, ವಿಠ್ಠಲ ಶೆಟ್ಟಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಕಾವೂರು, ಮಂಗಳೂರಿನ ಡ್ರೀಮ್ ಬಾಯ್ಸ್ ಡಾನ್ಸ್ ಗ್ಯಾಲರಿ ವತಿಯಿಂದ ‘ಗಾನ ನೃತ್ಯ ವೈಭವ’ ಕಾರ್ಯಕ್ರಮ ನಡೆಯಿತು.

ಪ್ರಕಾಶ್ ಪಾವಂಜೆ ಪ್ರಾರ್ಥಿಸಿದರು. ಶಿವಾಯ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಸ್ವಾಗತಿಸಿದರು. ಡಾ. ಸ್ವರ್ಣ ಶೆಟ್ಟಿ ಹಾಗೂ ಉಪನ್ಯಾಸಕ ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರಶಾಂತ್ ಶೆಟ್ಟಿ ಪಂಜ ವಂದಿಸಿದರು.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments