ಬಂಗಾರದ ಬಾಲೆ ನೀರೂ ದಂಡಾ ಅವರು ಮತ್ತೊಂದು ದಾಖಲೆ ಬರೆದು ಪದಕಗಳ ಹ್ಯಾಟ್ರಿಕ್ ಬರೆದರು; ಅದರಲ್ಲಿ ಎರಡು ಚಿನ್ನ ಎನ್ನುವುದು ವಿಶೇಷ.
ಭಾರತಕ್ಕೆ ಮೊತ್ತ ಮೊದಲ ಟ್ರ್ಯಾಪ್ ಶೂಟಿಂಗ್ ಸ್ವರ್ಣ ಪದಕ ಗೆದ್ದು ಕೊಟ್ಟಿದ್ದ ನೀರೂ ದಂಡಾ ಅವರು ಈಗ ಮಿಕ್ಸೆಡ್ ಟ್ರ್ಯಾಪ್ ಶೂಟಿಂಗಿನಲ್ಲೂ ಸ್ವರ್ಣ ಗೆದ್ದು ತಂದಿದ್ದಾರೆ. ಕನಕ ಗೆದ್ದಾಗ ಅವರು ಅದನ್ನು ಗಡಿ ಕಾಯುವ ಸೈನಿಕರಿಗೆ ಅರ್ಪಿಸಿದ್ದರು. ಅವರು ಕೂಡ ಭಾರತದ ಸೇನಾ ಪೋಲೀಸು ಪಡೆಯಲ್ಲಿ ಅವರು ನೈಬ್ ಸುಬೇದಾರ್ ಆಗಿ ಸೇವೆ ಸಲ್ಲಿಸುವವರಾಗಿದ್ದಾರೆ. ಮೊದಲೇ ಒಂದು ಬೆಳ್ಳಿ ಗೆದ್ದಿದ್ದ ಅವರು ಈಗ ಇನ್ನೊಂದು ಬಂಗಾರ ಗೆದ್ದು ಪದಕಗಳ ಹ್ಯಾಟ್ರಿಕ್ ಸಾಧಿಸಿದರು.
ಮಿಕ್ಸೆಡ್ ಟ್ರ್ಯಾಪ್ ಶೂಟಿಂಗಿನಲ್ಲಿ ನೀರೂ ದಂಡಾ ಅವರು ಕೈನಾನ್ ಚೇನೈ ಜೊತೆಗೂಡಿ ಕನಕ ಕೊರಳಿಗೇರಿಸಿಕೊಂಡಿದ್ದಾರೆ. ಈ ಗೆಲುವಿನ ವೇಳೆ 34 ಪಾಯಿಂಟ್ ಗಳಿಸಿದ್ದಾರೆ; ಇದು ಏಶಿಯನ್ ಗೇಮ್ಸ್ ದಾಖಲೆಯಾಗಿದೆ. 32 ಅಂಕ ಪಡೆದ ಕತಾರ್‌ಗೆ ಬೆಳ್ಳಿ, 23ಅಂಕದ ಚೀನಾ ಕಂಚು ಗಳಿಸಿತು; ಇರಾನ್ ನಾಲ್ಕನೆಯದಾಯಿತು. ಭಾರತವು ಈ ಚಿನ್ನದೊಂದಿಗೆ 9ಚಿನ್ನ, 21 ಬೆಳ್ಳಿ, 27 ಕಂಚಿನ ಪದಕದೊಂದಿಗೆ ಒಟ್ಟು 52 ಪದಕ ಗೆದ್ದು ಪದಕ ಪಟ್ಟಿಯಲ್ಲಿ ಎಂಟನೆಯ ಸ್ಥಾನಕ್ಕೆ ಏರಿದೆ.
ಏಷ್ಯನ್ ಗೇಮ್ಸ್|ಮಿಕ್ಸೆಡ್ ಟ್ರ್ಯಾಪ್ ಶೂಟಿಂಗ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ :ನೀರೂ ದಂಡಾ-ಕೈನಾನ್ ಚೇನೈ ಜೋಡಿಗೆ ಸ್ವರ್ಣ
RELATED ARTICLES

