ಮಜೂರು: ಕಾಪು ತಾಲೂಕು ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ, ಕರಂದಾಡಿ ಇದರ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ಮಂಜೂರಾದ ₹1 ಲಕ್ಷ ಅನುದಾನದ ಮಂಜೂರಾತಿ ಪತ್ರವನ್ನು ಭಜನಾ ಮಂಡಳಿಗೆ ಹಸ್ತಾಂತರಿಸಲಾಯಿತು.
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಪಾದೂರು ಅರುಣ್ ಶೆಟ್ಟಿ ಹಾಗೂ ತಾಲೂಕು ಯೋಜನಾಧಿಕಾರಿಗಳು ಮಂಜೂರಾತಿ ಪತ್ರವನ್ನು ಭಜನಾ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಊರಿನ ಮುಖಂಡರಾದ ದಿನೇಶ್ ಶೆಟ್ಟಿ, ವಿಷ್ಣುಮೂರ್ತಿ ದೇವಸ್ಥಾನದ ಪದ್ಮನಾಭ ಶಾನುಭೋಗ್, ಭಜನಾ ಮಂಡಳಿ ಅಧ್ಯಕ್ಷ ಅವಿನಾಶ್, ಪದಾಧಿಕಾರಿಗಳಾದ ಶ್ರೀಧರ್ ಶೆಟ್ಟಿಗಾರ್, ಭಾಸ್ಕರ್, ಅರುಣ್ ರಾವ್ ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ, ಮೇಲ್ವಿಚಾರಕಿ ವಿನುತಾ, ಶೌರ್ಯ ಕಿಶೋರ್ ಆಚಾರ್ಯ, ಸದಾಶಿವ, ರಜನಿ, ಶರ್ಮಿಳಾ, ಪ್ರಮೀಳಾ, ಸುಧಾ ಸೇರಿದಂತೆ ಭಜನಾ ಮಂಡಳಿಯ ಸದಸ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


