ಮಂಗಳೂರು: ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಶಶಾಂಕ್ ಡಿ.ಎಸ್. ಅವರು ಹಾಸನದಲ್ಲಿ ನಡೆದ ದಸರಾ ಕ್ರೀಡಾಕೂಟಗಳ ಮುಕ್ತ ವಿಭಾಗ ಮಟ್ಟದ ಈಜು ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕಗಳ ಗೆಲುವು ಸಾಧಿಸಿದ್ದಾರೆ.ರಾಜ್ಯದಿಂದ ಬಂದ ಹಲವು ವಿದ್ಯಾರ್ಥಿಗಳ ನಡುವೆ ಶಶಾಂಕ್ ಡಿ.ಎಸ್ ಅವರ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ ಕೊಂಡಾಡಿದೆ. ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ. ಅಲ್ಮೇಡಾ ಎಸ್.ಜೆ, ಉಪ ಪ್ರಾಂಶುಪಾಲರಾದ ಲಾರೆಲ್ ಡಿ’ಸೋಜಾ,
ಅಪರ್ಣಾ ಸುರೇಶ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿ ,ಮುಂದಿನ ಕ್ರೀಡಾ ಪ್ರಯಾಣಕ್ಕೆ ಶುಭ ಹಾರೈಸಿದ್ದಾರೆ.
ದಸರಾ ಕ್ರೀಡಾಕೂಟ: ಮುಕ್ತ ವಿಭಾಗ ಮಟ್ಟದ ಈಜು ಸ್ಪರ್ಧೆಯಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರತಿಭೆ ಶಶಾಂಕ್ ಡಿ.ಎಸ್.ಗೆ ಎರಡು ಕಂಚಿನ ಪದಕ
RELATED ARTICLES

