HomeFresh Newsಬ್ರಿಟಿಷ್ ಲೇಖಕ ಜೆಫ್ರಿ ಆರ್ಚರ್ ನಿಧನ

ಬ್ರಿಟಿಷ್ ಲೇಖಕ ಜೆಫ್ರಿ ಆರ್ಚರ್ ನಿಧನ

ಪ್ರಸಿದ್ಧ ಕಾದಂಬರಿಕಾರ, ಬ್ರಿಟಿಷ್‌ ಲೇಖಕ ಜೆಫ್ರಿ ಆರ್ಚರ್ ತಮ್ಮ ಎಂಬತ್ತಾರನೆಯ ಪ್ರಾಯದಲ್ಲಿ ನಿಧನರಾದರು.

ಓದುಗರಿಗೆ ಹರುಷ ಒದಗಿಸಿದ, ನಿಜವಾದ ಸ್ನೇಹಿತ ಬರಹಗಾರನ ನಿಧನ ಶೋಕ ತಂದಿದೆ ಎಂದು ಪ್ರಕಟಣಾ ಸಂಸ್ಥೆ ಹಾರ್ಪರ್ ಕಾಲಿನ್ಸ್ ಸಿಇಒ ಕೇಟ್ ಎಲ್ಟನ್ ಪೋಸ್ಟ್ ಮಾಡಿದ್ದಾರೆ. ಅವರ ಕೊನೆಯ ಕಾದಂಬರಿ ಆ್ಯಡಮ್ ಆಂಡ್ ಈವ್ ಈ ತಿಂಗಳು ಬಿಡುಗಡೆಯಾಗುತ್ತಿದೆ.

ಅವರ ಮೊದಲ ಕಾದಂಬರಿ 1976ರಲ್ಲಿ ನಾಟ್ ಎ ಪೆನ್ನಿ ಮೋರ್, ನಾಟ್ ಎ ಪೆನ್ನಿ ಲೆಸ್ ನಿಂದಲೇ ಅವರು ಜನಪ್ರಿಯರಾಗಿದ್ದರು. ಕೇನ್ ಆಂಡ್ ಏಬಲ್ ಮತ್ತೊಂದು ಜನಪ್ರಿಯ ಕಾದಂಬರಿ. ಅವರ ಕಾದಂಬರಿಗಳು ಒಟ್ಟು ಮೂವತ್ತು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ.

ರಾಜಕೀಯವಾಗಿ ಕನ್ಸರ್ವೇಟಿವ್ ಪಕ್ಷದಲ್ಲಿ ಗುರುತಿಸಿಕೊಂಡು ಸಂಸದರೂ ಆಗಿದ್ದರು. ಮಾರ್ಗರೇಟ್ ಥ್ಯಾಚರ್ ಬ್ರಿಟನ್ನಿನ ಪ್ರಧಾನಿ ಆಗಿದ್ದಾಗ ಉನ್ನತ ಹುದ್ದೆ ನಿರ್ವಹಿಸಿದ್ದರು.

ಒಂದು ಸುಳ್ಳು ಹೇಳಿಕೆಗಾಗಿ ಅವರಿಗೆ 2001ರಲ್ಲಿ ನಾಲ್ಕು ವರುಷಗಳ ಶಿಕ್ಷೆಯಾಗಿತ್ತು. ಅದು ಅವರ ರಾಜಕೀಯ ಜೀವನ ಮುಗಿಸಿತ್ತು ಹಾಗೂ ಜನಪ್ರಿಯತೆಗೂ ಕುಂದು ತಂದಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments