HomeFresh Newsಕಾಪು ಹೊಸ ಮಾರಿಗುಡಿಯಲ್ಲಿ ಚಂಡಿಕಾಯಾಗ, ಕುಣಿತ ಭಜನಾ ಸ್ಪರ್ಧೆಬಾಲ ವಿಕಾಸ ಕುಣಿತ ಭಜನಾ ಮಂಡಳಿಗೆ ಪ್ರಥಮ...

ಕಾಪು ಹೊಸ ಮಾರಿಗುಡಿಯಲ್ಲಿ ಚಂಡಿಕಾಯಾಗ, ಕುಣಿತ ಭಜನಾ ಸ್ಪರ್ಧೆಬಾಲ ವಿಕಾಸ ಕುಣಿತ ಭಜನಾ ಮಂಡಳಿಗೆ ಪ್ರಥಮ ಬಹುಮಾನ

ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದ ಆರನೇ ದಿನ ಮಾತೃ ವೈಭವ ಸೇವಾ ಸಮಿತಿ ಮುಂಬೈ ವಲಯದ ವತಿಯಿಂದ ಚಂಡಿಕಾಯಾಗ, ಘಂಟಾನಾದ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರಗಿದವು.
ಮಾತೃ ವೈಭವ ಸೇವಾ ಸಮಿತಿಯ ಉಪಾಧ್ಯಕ್ಷ ಉದಯ ಸುಂದರ್ ಶೆಟ್ಟಿ ಅವರ ನೇತೃತ್ವದಲ್ಲಿ ಮುಂಬೈ ಸಮಿತಿಯ ಸದಸ್ಯರು ಹಾಗೂ ಮುಂಬೈನ ಅಮ್ಮನ ಭಕ್ತರ ಪರವಾಗಿ ವಿವಿಧ ಸೇವೆಗಳನ್ನು ನೆರವೇರಿಸಲಾಯಿತು.


ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ನಡೆಯಿತು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 15 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಹೊಸಬೆಟ್ಟು ಕುಳಾಯಿಯ ಬಾಲ ವಿಕಾಸ ಕುಣಿತ ಭಜನಾ ಮಂಡಳಿ ಪ್ರಥಮ, ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಕುಣಿತ ಭಜನಾ ಮಂಡಳಿ ದ್ವಿತೀಯ, ಪೊಳಲಿಯ ಕಾಂಜಲಕೋಡಿಯ ಈಶ್ವರಿ ಭಜನಾ ಮಂಡಳಿ ತೃತೀಯ ಹಾಗೂ ಮಂಗಳೂರಿನ ಬೈಕಂಪಾಡಿಯ ಶ್ರೀ ಶೇಷಶಯನ ಭಜನಾ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡವು.
ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭದಲ್ಲಿ ದೇವಸ್ಥಾನದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಅವರು ಸ್ಪರ್ಧಾಳುಗಳು ಹಾಗೂ ಭಕ್ತರಿಗೆ ಆಶೀರ್ವಚನ ನೀಡಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಮಾತೃ ವೈಭವ ಸೇವಾ ಸಮಿತಿ ಮುಂಬೈ ವಲಯದ ನವಿಮುಂಬೈ ಘಟಕದ ಮುಖ್ಯ ಸಂಚಾಲಕ ಖಾಂದೇಶ್ ಭಾಸ್ಕರ್ ಶೆಟ್ಟಿ, ಮಂಗಳೂರು ಮೀನುಗಾರಿಕಾ ಅಭಿವೃದ್ಧಿ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕ ಡಾ. ಜಿ. ಸಂತೋಷ್ ಕುಮಾರ್ (KAS), ಡಾ. ಹೇಮಲತಾ, ಕುಣಿತ ಭಜನಾ ಸ್ಪರ್ಧೆಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡ ರಮೇಶ್ ಕಲ್ಮಾಡಿ, ಸಾವಿತ್ರಿ ಗಣೇಶ್, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಹಾಗೂ ರೇಣುಕಾ ಜೋಗಿ ಉಪಸ್ಥಿತರಿದ್ದರು.
ನವರಾತ್ರಿಯ ಆರನೇ ದಿನದ ಕಾರ್ಯಕ್ರಮಗಳ ಪ್ರಾಯೋಜಕರಾದ ಉದಯ ಸುಂದರ್ ಶೆಟ್ಟಿ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ಸಾಂಸ್ಕೃತಿಕ ನಿರ್ದೇಶಕ ಮಾಧವ ಆರ್. ಪಾಲನ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments