HomeFresh Newsಭಂಡಾರಿ ಸಮುದಾಯದ ಅಸ್ಮಿತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಸಂಶೋಧನೆ: ಪ್ರೊ. ಪ್ರವೀಣ್ ಭಂಡಾರಿಗೆ ಪಿಎಚ್‌.ಡಿ....

ಭಂಡಾರಿ ಸಮುದಾಯದ ಅಸ್ಮಿತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಸಂಶೋಧನೆ: ಪ್ರೊ. ಪ್ರವೀಣ್ ಭಂಡಾರಿಗೆ ಪಿಎಚ್‌.ಡಿ. ಪದವಿ

ಮೂಡುಬಿದಿರೆ: ಮಂಗಳೂರಿನ ವಿಶ್ವವಿದ್ಯಾನಿಲಯದಿಂದ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಪ್ರೊ. ಪ್ರವೀಣ್ ಭಂಡಾರಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌.ಡಿ.) ಪದವಿ ಲಭಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಾಪಕರಾಗಿರುವ ಡಾ. ಸಿ. ಎಂ. ರಾಜಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಪ್ರೊ. ಪ್ರವೀಣ್ ಭಂಡಾರಿ ಅವರು ಸಂಶೋಧನೆ ನಡೆಸಿದ್ದರು.
“Identity, Social Justice and Political Transformation – Study of Bhandary Community in Dakshina Kannada and Udupi Districts” (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭಂಡಾರಿ ಸಮುದಾಯದ ಅಸ್ಮಿತೆ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಪರಿವರ್ತನೆಯ ಅಧ್ಯಯನ) ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‌.ಡಿ. ಪದವಿ ನೀಡಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಭಂಡಾರಿ ಸಮುದಾಯದ ಸಾಮಾಜಿಕ ಅಸ್ಮಿತೆ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಪರಿವರ್ತನೆಯಂತಹ ಮಹತ್ವದ ವಿಷಯಗಳನ್ನು ಒಳಗೊಂಡಿರುವ ಈ ಸಂಶೋಧನೆ ಗಮನಾರ್ಹವಾಗಿದೆ.
ಪ್ರೊ. ಪ್ರವೀಣ್ ಭಂಡಾರಿ ಅವರು ತಮ್ಮ ಉಪನ್ಯಾಸಕ ವೃತ್ತಿ ಜೀವನವನ್ನು ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆಯಲ್ಲಿ ಪ್ರಾರಂಭಿಸಿದ್ದು, ಬಳಿಕ ಆಳ್ವಾಸ್ ಕಾಲೇಜು ಮೂಡುಬಿದಿರೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯ ಸೇವೆಗೆ ನೇಮಕಗೊಂಡ ನಂತರ ಭದ್ರಾವತಿಯ ಹೆಬ್ಬೂರು ಮಹಾವಿದ್ಯಾಲಯ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಮತ್ತು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು, ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಕಾಲೇಜಿಗೆ ಹಾಗೂ ಭಂಡಾರಿ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ.
ಸಾಮಾಜಿಕ ನ್ಯಾಯ, ಸಮುದಾಯದ ಅಸ್ಮಿತೆ ಹಾಗೂ ರಾಜಕೀಯ ಪರಿವರ್ತನೆಯಂತಹ ಮಹತ್ವದ ವಿಷಯದ ಕುರಿತು ಸಂಶೋಧನೆ ನಡೆಸಿ ಪಿಎಚ್‌.ಡಿ. ಪದವಿ ಪಡೆದಿರುವ ಪ್ರೊ. ಪ್ರವೀಣ್ ಭಂಡಾರಿ ಅವರ ಸಾಧನೆ ಶೈಕ್ಷಣಿಕ ವಲಯದಲ್ಲಿ ಗಮನ ಸೆಳೆದಿದೆ.

swarna sep
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments