HomeFresh Newsಜ್ಞಾನಸೇತು 2026 - “ಶಾಂತಿಗಾಗಿ ವಿಜ್ಞಾನ” ಸ್ಪರ್ಧೋತ್ಸವದಲ್ಲಿ ಭಾಗವಹಿಸಲು ಪ್ರೌಢಶಾಲೆ ಮತ್ತುಪದವಿಪೂರ್ವ ಕಾಲೇಜುಗಳಿಗೆ ಎಸ್‌ಜೆಇಸಿ ಆಹ್ವಾನ

ಜ್ಞಾನಸೇತು 2026 – “ಶಾಂತಿಗಾಗಿ ವಿಜ್ಞಾನ” ಸ್ಪರ್ಧೋತ್ಸವದಲ್ಲಿ ಭಾಗವಹಿಸಲು ಪ್ರೌಢಶಾಲೆ ಮತ್ತುಪದವಿಪೂರ್ವ ಕಾಲೇಜುಗಳಿಗೆ ಎಸ್‌ಜೆಇಸಿ ಆಹ್ವಾನ

ಮಂಗಳೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ), ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ “ಜ್ಞಾನಸೇತು 2026 – ಶಾಂತಿಗಾಗಿ ವಿಜ್ಞಾನ” ಎಂಬ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಪರ್ಧೋತ್ಸವದಲ್ಲಿ ಭಾಗವಹಿಸಲು ಆಹ್ವಾನ ನೀಡಿದೆ. ಎಸ್‌ಜೆಇಸಿಯ ಹಳೆ ವಿದ್ಯಾರ್ಥಿಗಳ ಸಂಘವು
ಎಸ್‌ಜೆಇಸಿ ಫೌಂಡೇಶನ್‌ನ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸ್ಪರ್ಧೋತ್ಸವವು 2026ರ ಅಕ್ಟೋಬರ್ 30ರ ಶುಕ್ರವಾರದಂದು ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಕಾಲೇಜಿನ ಕಲಾಂ ಸಭಾಂಗಣದಲ್ಲಿ ನಡೆಯಲಿದೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲವನ್ನು ಬೆಳೆಸುವುದು, ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ವಿಜ್ಞಾನ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಜಗತ್ತನ್ನು ಅನ್ವೇಷಿಸಲು ವೇದಿಕೆ ಕಲ್ಪಿಸುವುದು ಈ ಸ್ಪರ್ಧೋತ್ಸವದ ಪ್ರಮುಖ ಉದ್ದೇಶವಾಗಿದೆ. “ಶಾಂತಿಗಾಗಿ ವಿಜ್ಞಾನ” ಎಂಬ ಆಶಯದೊಂದಿಗೆ,ವೈಜ್ಞಾನಿಕ ಜ್ಞಾನ ಮತ್ತು ಸೃಜನಶೀಲ ಚಿಂತನೆಗಳನ್ನು ಬಳಸಿಕೊಂಡು ನೈಜ ಜಗತ್ತಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಸುಸ್ಥಿರ ಮತ್ತು ಶಾಂತಿಯುತ ಭವಿಷ್ಯ ನಿರ್ಮಾಣಕ್ಕೆ ಕೊಡುಗೆ ನೀಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

ಎಲ್ಲಾ ವಿಭಾಗಗಳ ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಮುಕ್ತವಾಗಿರುವ ಈ ಸ್ಪರ್ಧೋತ್ಸವದಲ್ಲಿ ವೈಜ್ಞಾನಿಕ ಸಾಮರ್ಥ್ಯ, ಸೃಜನಶೀಲತೆ, ತಂಡದ ಕಾರ್ಯಕ್ಷಮತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳನ್ನು ಪ್ರದರ್ಶಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇನ್ನೋವೇಟ್ ಫಾರ್
ಪೀಸ್ – ಮಾದರಿ ಸ್ಪರ್ಧೆ, ಮಿಷನ್ ಅರ್ಥ್ – ಪರಿಸರ ಸ್ನೇಹಿ ತಂತ್ರಜ್ಞಾನ ಆಧಾರಿತ ಪೋಸ್ಟರ್ ಸ್ಪರ್ಧೆ, ಕ್ವಿಜ್_ವಿಜ್ 2026 – ಜ್ಞಾನದ ಅನ್ವೇಷಣೆ, ಇಗ್ನೈಟ್ & ಇನ್‌ಸ್ಪೈರ್, ಹೈಡ್ರೋಕ್ಯಾನನ್ ಮತ್ತು ಲೋಡ್ ಅಪ್ ಪ್ರಮುಖ ಸ್ಪರ್ಧೆಗಳಾಗಿವೆ. ರಸಪ್ರಶ್ನೆ ಸ್ಪರ್ಧೆಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿದ್ದು, ಇತರ
ಸ್ಪರ್ಧೆಗಳು ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿವೆ.
ಸ್ಪರ್ಧೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆ ಟೆಕ್ನೋವಾ – ಯೋಜನಾ ಪ್ರದರ್ಶನವಾಗಿದ್ದು, ಇಲ್ಲಿ ವಿದ್ಯಾರ್ಥಿಗಳು ಎಸ್‌ಜೆಇಸಿಯ ವಿದ್ಯಾರ್ಥಿಗಳು ರೂಪಿಸಿರುವ ನವೀನ ಎಂಜಿನಿಯರಿಂಗ್ ಯೋಜನೆಗಳನ್ನು ವೀಕ್ಷಿಸಬಹುದು ಹಾಗೂ ಅವರೊಂದಿಗೆ ಸಂವಾದ ನಡೆಸಬಹುದು.


ಜ್ಞಾನಸೇತು 2026ರಲ್ಲಿ ಅತ್ಯುತ್ತಮ ಸಾಧನೆ ಮಾಡುವ ತಂಡಗಳಿಗೆ ನಗದು ಬಹುಮಾನ, ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಿವಿಧ ಸ್ಪರ್ಧೆಗಳಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಅತ್ಯುತ್ತಮ ಶಾಲೆ ಮತ್ತು ಅತ್ಯುತ್ತಮ ಪದವಿಪೂರ್ವ ಕಾಲೇಜಿಗೆ ಸಮಗ್ರ ಚಾಂಪಿಯನ್‌ಶಿಪ್ ಟ್ರೋಫಿಗಳನ್ನು ಪ್ರದಾನ ಮಾಡಲಾಗುತ್ತದೆ. ನೋಂದಾಯಿತ ವಿದ್ಯಾರ್ಥಿಗಳು ಹಾಗೂ ಅವರೊಂದಿಗೆ ಆಗಮಿಸುವ ಶಿಕ್ಷಕರು ಅಥವಾ ಸಂಯೋಜಕರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಈ ಸ್ಪರ್ಧೋತ್ಸವದ ಒಟ್ಟು ನಗದು ಬಹುಮಾನದ ಮೊತ್ತ ₹1 ಲಕ್ಷವಾಗಿದೆ.

ವಿದ್ಯಾರ್ಥಿಗಳಲ್ಲಿರುವ ವೈಜ್ಞಾನಿಕ ಪ್ರತಿಭೆಯನ್ನು ಬೆಳೆಸಲು ಮತ್ತು ಪ್ರಾಯೋಗಿಕ ಕಲಿಕೆಗೆ ಉತ್ತೇಜನ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳ ತಂಡಗಳನ್ನು ನೋಂದಾಯಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ನೋಂದಣಿ ಉಚಿತವಾಗಿದ್ದು, ಅಧಿಕೃತ ಆನ್‌ಲೈನ್ ನೋಂದಣಿ ನಮೂನೆಯ ಮೂಲಕ ಮಾತ್ರ ಮಾಡಬೇಕು. ಸ್ಥಳದಲ್ಲಿಯೇ ನೋಂದಣಿಗೆ ಅವಕಾಶವಿರುವುದಿಲ್ಲ. ಪ್ರತಿ ಸಂಸ್ಥೆಯಿಂದ ಗರಿಷ್ಠ 13 ವಿದ್ಯಾರ್ಥಿಗಳು ಶಿಕ್ಷಕರು ಅಥವಾ ಸಂಯೋಜಕರೊಂದಿಗೆ ಭಾಗವಹಿಸಬಹುದು. ನಿಗದಿತ ಒಟ್ಟು ವಿದ್ಯಾರ್ಥಿಗಳ ಮಿತಿಗೆ ಒಳಪಟ್ಟು ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ನೋಂದಣಿಗೆ ಪರಿಷ್ಕೃತ ಕೊನೆಯ ದಿನಾಂಕ 2026ರ ಅಕ್ಟೋಬರ್ 26. ಆಸಕ್ತ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು ಆದಷ್ಟು ಬೇಗ ತಮ್ಮ ವಿದ್ಯಾರ್ಥಿಗಳ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.


ನೋಂದಣಿ ಲಿಂಕ್: https://bit.ly/JnanaSethu2026 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಫ್ರಾಂಕೊ ಮೆನೆಜಸ್: 9945538369, ಒಲಿವಿಯಾ ಸಿಕ್ವೇರಾ: 9886414624

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments