ಮೂಡುಬಿದಿರೆ: ಇಲ್ಲಿನ ಅಯನಾ ತಂಡ ಪ್ರಸ್ತುತಪಡಿಸುತ್ತಿರುವ, ಹೆಸರಾಂತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ನಿರ್ದೇಶನದ ಹಾಗೂ ಮೂಡುಬಿದಿರೆಯ ದೂರದರ್ಶನ ಕಲಾವಿದೆ ವಿದುಷಿ ಅಯನಾ.ವಿ. ರಮಣ್ ಅಭಿನಯದ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ರಚನೆಯ ಏಕವ್ಯಕ್ತಿ ನಾಟಕ ‘ಊರ್ಮಿಳಾ’ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರದರ್ಶನಗೊಳ್ಳಲಿದೆ.

ಬೆಂಗಳೂರಿನ ದಕ್ಷಿಣ್ ಫೌಂಡೇಶನ್ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನ.13ರಂದು ಆಯೋಜಿಸಿರುವ ‘ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಸವಾಲುಗಳು: ವಿಜ್ಞಾನ, ಜೀವನೋಪಾಯಗಳು ಹಾಗೂ ನೀತಿ ಪ್ರಕ್ರಿಯೆಗಳು’ ಎಂಬ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ಈ ವಿಚಾರ ಸಂಕಿರಣದಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ತಜ್ಞರು, ವಿದ್ವಾಂಸರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.


