HomeFresh Newsರಸ್ತೆ ಗುಂಡಿಗೆ ಬಿದ್ದು ಸಂಸದರು, ಶಾಸಕರು ಬರಬೇಕೆಂದು ಹಠ ಹಿಡಿದ ವ್ಯಕ್ತಿಯ ಬಂಧನ, ಬಿಡುಗಡೆ

ರಸ್ತೆ ಗುಂಡಿಗೆ ಬಿದ್ದು ಸಂಸದರು, ಶಾಸಕರು ಬರಬೇಕೆಂದು ಹಠ ಹಿಡಿದ ವ್ಯಕ್ತಿಯ ಬಂಧನ, ಬಿಡುಗಡೆ

ಮೂಡುಬಿದಿರೆ-ಬೆಳ್ತಂಗಡಿ ಹಾದು ಹೋಗುವ ರಾಜ್ಯ ಹೆದ್ದಾರಿಯ ತ ಮಹಾವೀರ ಕಾಲೇಜಿನ ಮಾರಿಗುಡಿ ಬಳಿ ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡ ಕೋಪದಲ್ಲಿ ತನ್ನ ದ್ವಿಚಕ್ರ ವಾಹನವನ್ನು ರಸ್ತೆಗೆ ಅಡ್ಡಯಿಟ್ಟು ಸಂಸದರು, ಶಾಸಕರು ಬರಬೇಕೆಂದು ಹಠ ಹಿಡಿದು ವಾಹನ ಸಂಚಾರ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದ ವ್ಯಕ್ತಿ ಪುಚ್ಚಮೊಗರುವಿನ ಪ್ರಶಾಂತ್ ಯಾನೆ ಪಚ್ಚುನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಸಂಜೆ ವೇಳೆಗೆ ಪ್ರಶಾಂತ್ ಎಂಬ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿದ್ದ ಹೊಂಡಗಳನ್ನು ಗಮನಿಸದೆ ಬಿದ್ದು ಗಾಯಗೊಂಡಿದ್ದರು. ಇದರಿಂದ ಆಕ್ರೋಶಿತಗೊಂಡ ಪ್ರಶಾಂತ್ ತನ್ನ ಮೋಟಾರು ಸೈಕಲನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿ ಈ ರಸ್ತೆಯಲ್ಲಿ ಉಂಟಾದ ಹೊಂಡ ಗುಂಡಿಗಳನ್ನು ಮುಚ್ಚಲು ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಬರಬೇಕು ರಸ್ತೆಯಲ್ಲಿರುವ ಹೊಂಡ ಗುಂಡಿಗಳನ್ನು ಕೂಡಲೇ ಮುಚ್ಚಿ ಡಾಮರೀಕರಣ ಮಾಡಬೇಕು ಇಲ್ಲದಿದ್ದರೆ ಈ ರಸ್ತೆಯಲ್ಲಿ ಯಾವುದೇ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ವಾಹನ ಸಂಚಾರ ತೊಂದರೆಯುಂಟು ಮಾಡಿದ್ದರು.

ಸುಗಮ ಸಂಚಾರ ನಿರ್ವಣೆಗೆ ಬಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಅವಾಚ್ಯ ಶಬ್ದಗಳಾದ “ಬೋಸ್ಡಿಕೆ ಮೂಡುಬಿದಿರೆಯ ಇನ್ಸ್ ಪೆಕ್ಟರನ್ನು ಎಲ್ಲಿಂದಲೋ ಘಟ್ಟದಿಂದ ಬಂದವನು ಅವನ ಅಧಿಕಾರ ಇಲ್ಲಿ ನಡೆಯುವುದಿಲ್ಲ, ನಾನು ಇಲ್ಲಿಯೇ ಹುಟ್ಟಿ ಬೆಳೆದವ ಎಂಬುದಾಗಿ ಬೈದು ದುರ್ವರ್ತನೆ ತೋರಿದ್ದಲ್ಲದೆ, ವಾಹನದಲ್ಲಿ ಚಲಿಸುತ್ತಿದ್ದವರಿಗೆ ಹಾಗೂ ಇತರ ಸಾರ್ವಜನಿಕರ ವಾಹನ ಸಂಚಾರಕ್ಕೆ ತೀವ್ರ ತರಹದ ತೊಂದರೆಯನ್ನುಂಟು ಮಾಡಿದ್ದರು.

ಈ ಬಗ್ಗೆ ಪ್ರಶಾಂತ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ದೂರಿನಂತೆ ಮೂಡುಬಿದಿರೆ ಪೊಲೀಸ್ ಠಾಣಾ ಅ.ಕ್ರ 153/2026 ಕಲಂ:126(2), 352, 351(2) ಬಿ ಎನ್ ಎಸ್ ನಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಂಡು ಬಿಡುಗಡೆ ಮಾಡಲಾಗಿದೆ.

Swarna jewellery - 3
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments