HomeFresh Newsಶ್ರೀ ಚಂದ್ರಶೇಖರ ದೇವರ ನವೀಕೃತ ಪುಷ್ಕರಣಿಯ ಸಮರ್ಪಣಾ ಸಮಾರಂಭ

ಶ್ರೀ ಚಂದ್ರಶೇಖರ ದೇವರ ನವೀಕೃತ ಪುಷ್ಕರಣಿಯ ಸಮರ್ಪಣಾ ಸಮಾರಂಭ

ಮೂಡುಬಿದಿರೆ: ದೊಡ್ಡಮನೆ ರಸ್ತೆಯಲ್ಲಿರುವ ಸುಮಾರು ೬೦೦ ವರ್ಷಗಳ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಹೊಂದಿರುವ ಶ್ರೀ ಚಂದ್ರಶೇಖರ ದೇವಸ್ಥಾನದ ನವೀಕೃತ ಪುಷ್ಕರಣಿಯ ಸಮರ್ಪಣಾ ಸಮಾರಂಭವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷತೆಯನ್ನೂ ವಹಿಸಿದ್ದ ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಅವರು ನೆರವೇರಿಸಿ ಮಾತನಾಡಿ, ಅರಮನೆಯ ಪ್ರಧಾನಿಗಳಾದ ನಾರಣಪ್ಪಯ್ಯನವರು ಆರಾಧಿಸಿಕೊಂಡು ಬಂದಿರುವ ಶ್ರೀ ಚಂದ್ರಶೇಖರ ದೇವರಿಗೂ ಅರಮನೆಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧವು ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಮುಂದುವರಿಯಲಿದೆ. ಶ್ರೀ ಚಂದ್ರಶೇಖರ ದೇವರ ಜೀರ್ಣೋದ್ಧಾರದ ಸಂದರ್ಭದಲ್ಲಿ ಅರಮನೆಯ ಸಹಕಾರ ಹಾಗೂ ಬೆಂಬಲ ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದರು.

ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಆರ್‌ಪಿಎಲ್ ಸಂಸ್ಥೆ ಸ್ಥಾಪನೆಯಾಗಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ನಮ್ಮೂರಿನವರೇ ಆದ ಶ್ರೀ ವೀರಪ್ಪ ಮೊಯಿಲಿಯವರ ದೂರದೃಷ್ಟಿ ಹಾಗೂ ವಿಶೇಷ ಪ್ರಯತ್ನಗಳು ಪ್ರಮುಖ ಕಾರಣವಾಗಿವೆ. ಹಲವಾರು ವಿರೋಧಗಳ ನಡುವೆಯೂ ಎಂಆರ್‌ಪಿಎಲ್ ಸಂಸ್ಥೆಯನ್ನು ಜಿಲ್ಲೆಗೆ ತರುವಲ್ಲಿ ಅವರು ತೋರಿದ ಬದ್ಧತೆ ಮತ್ತು ದೂರದೃಷ್ಟಿಯ ಫಲವಾಗಿ ಇಂದು ಈ ಸಂಸ್ಥೆಯು ವಿವಿಧ ಸಾಮಾಜಿಕ ಕಾರ್ಯಗಳಿಗೆ ಸಿಎಸ್‌ಆರ್ ಅನುದಾನವನ್ನು ನೀಡುತ್ತಿರುವುದು ಶ್ಲಾಘನೀಯ. ಮೂಡುಬಿದಿರೆ ಪೇಟೆಯ ಹೃದಯಭಾಗದಲ್ಲಿರುವ ಶ್ರೀ ಚಂದ್ರಶೇಖರ ದೇವಸ್ಥಾನವು ಅತ್ಯಂತ ಪುರಾತನ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿರುವ ದೇವಾಲಯವಾಗಿದೆ. ಇಂತಹ ದೇವಾಲಯದ ಪುಷ್ಕರಿಣಿಯನ್ನು ನವೀಕರಿಸಿ ಸಮರ್ಪಿಸುತ್ತಿರುವುದು ಮೂಡುಬಿದಿರೆಯ ಇತಿಹಾಸದಲ್ಲಿ ಸ್ಮರಣೀಯ ಹಾಗೂ ಐತಿಹಾಸಿಕ ಕಾರ್ಯಕ್ರಮವಾಗಿದೆ. ಹದಿನೆಂಟು ಬಸದಿ, ಹದಿನೆಂಟು ದೇವಸ್ಥಾನ ಹಾಗೂ ಹದಿನೆಂಟು ಕೆರೆಗಳ ಹೆಗ್ಗಳಿಕೆಯನ್ನು ಹೊಂದಿರುವ ಮೂಡುಬಿದಿರೆಯ ಗತವೈಭವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ, ಕಾಲಕ್ರಮೇಣ ಅಳಿದುಹೋದ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ಸಂತಸದ ವಿಚಾರ. ಈ ಪುಷ್ಕರಿಣಿಯ ನವೀಕರಣಕ್ಕೆ ಸಹಕರಿಸಿದ ಹಾಗೂ ಕಾರ್ಯಕ್ಕೆ ಕೈಜೋಡಿಸಿದ ಎಲ್ಲಾ ಮಹನೀಯರಿಗೂ ಕೃತಜ್ಞತೆ ಸಲ್ಲಿಸಿ, ಈ ಮಹತ್ಕಾರ್ಯಕ್ಕೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಂ.ಆರ್.ಪಿ.ಎಲ್ ಮಂಗಳೂರಿನ ಸಿ.ಎಸ್.ಆರ್ ಫಂಡ್ ಮ್ಯಾನೇಜರ್ ಹರೀಶ್ ರಾವ್ ಭಾಗವಹಿಸಿದ್ದರು.

ಈ ಸಂದರ್ಭ ಒಖPಐ ಸಂಸ್ಥೆಯ ಮ್ಯಾನೆಜರ್ ಹರೀಶ್ ರಾವ್ ಹಾಗೂ ದೇವಸ್ಥಾನದ ಅರ್ಚಕರಾದ ರತ್ನಾಕರ್ ಭಟ್‌ರನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ಮೂಡುಬಿದಿರೆ ಎಂ.ಸಿ.ಎಸ್ ಬ್ಯಾಂಕಿನ ಶ್ರೀ ಚಂದ್ರಶೇಖರ ಎಂ, ಶ್ರೀ ಸುದೇಶ್ ಕುಮಾರ್ ಪಟ್ಟಣ ಶೆಟ್ಟಿ, ಉಮೇಶ್ ಪೈ, ರಾಯಿ ರಾಜ್‌ಕುಮಾರ್, ಗಣೇಶ್ ಕಾಮತ್ ಹಾಗೂ ಶ್ರೀ ಗಣೇಶ್ ನಾಯಕ್ ಹಾಗೂ ಗೌರವ ಉಪಸ್ಥಿತರಾಗಿ ಡಾ. ಮುರಳೀಕೃಷ್ಣ, ಅನುವಂಶೀಯ ಅರ್ಚಕರಾದ ಶ್ರೀ ರತ್ನಾಕರ ಭಟ್, ಪುಷ್ಕರಣಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೋಭಿತ್ ಕುಮಾರ್ ಜೈನ್ ಹಾಗೂ ಶ್ರೀ ಗೌರಿ ದೇವಸ್ಥಾನದ ರಾಜೇಶ್ ಭಟ್ ಉಪಸ್ಥಿತರಿದ್ದರು.

ಭಕ್ತಾದಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭವು ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಭಾವದಿಂದ ನೆರವೇರಿತು.

Sudha Furniture - 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments