Homeಕರಾವಳಿಸಂಪ್ರದಾಯದ ಪರಂಪರೆಗೆ ಸಾಕ್ಷಿಯಾದ ಗೋ ಪೂಜೆ: ಕುಟುಂಬ ಸಮೇತರಾಗಿ ಗೋಮಾತೆಗೆ ಕೆ. ರಘುಪತಿ ಭಟ್ ದಂಪತಿ...

ಸಂಪ್ರದಾಯದ ಪರಂಪರೆಗೆ ಸಾಕ್ಷಿಯಾದ ಗೋ ಪೂಜೆ: ಕುಟುಂಬ ಸಮೇತರಾಗಿ ಗೋಮಾತೆಗೆ ಕೆ. ರಘುಪತಿ ಭಟ್ ದಂಪತಿ ಪೂಜೆ

ಉಡುಪಿ: ದೀಪಾವಳಿ ಹಬ್ಬದ ಬಲಿಪಾಡ್ಯಮಿಯ ಸಂಭ್ರಮಕ್ಕೆ ಸಂಪ್ರದಾಯದ ಮೆರುಗು ನೀಡಿದ ಉಡುಪಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕ ಕೆ. ರಘುಪತಿ ಭಟ್ ಅವರ ಕುಟುಂಬ, ಕರಂಬಳ್ಳಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಕುಟುಂಬ ಸಮೇತರಾಗಿ ಗೋ ಪೂಜೆ ನೆರವೇರಿಸಿ ಭಾರತೀಯ ಸಂಸ್ಕೃತಿಯ ವಿಶಿಷ್ಟ ಪರಂಪರೆಯನ್ನು ಅನಾವರಣಗೊಳಿಸಿತು.
ಮನೆಯಲ್ಲೇ ಪ್ರೀತಿಯಿಂದ ಸಾಕಿರುವ ಅಪರೂಪದ ದೇಸಿಯ ಗಿರ್, ಪುಂಗನೂರು ಹಾಗೂ ಕಪಿಲ ತಳಿಯ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಹೂವಿನ ಹಾರಗಳನ್ನು ತೊಡಿಸಿ ಭಕ್ತಿಭಾವದಿಂದ ಆರಾಧಿಸಲಾಯಿತು. ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕುಟುಂಬದ ಸದಸ್ಯರು ಹಬ್ಬದ ಸಂಭ್ರಮವನ್ನು ಸಾಂಪ್ರದಾಯಿಕವಾಗಿ ಆಚರಿಸಿದರು.
ದೀಪಾವಳಿಯ ಬಲಿಪಾಡ್ಯಮಿಯಂದು ಗೋ ಪೂಜೆಗೆ ವಿಶೇಷ ಮಹತ್ವವಿದ್ದು, ಗೋವುಗಳನ್ನು ಸಂಪತ್ತು, ಸಮೃದ್ಧಿ ಹಾಗೂ ಕೃಷಿ ಸಂಸ್ಕೃತಿಯ ಪ್ರತೀಕವಾಗಿ ಕಾಣಲಾಗುತ್ತದೆ. ಇಂತಹ ಆಚರಣೆಗಳು ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗದೆ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಪರಿಚಯಿಸುವ ಕಾರ್ಯವೂ ಆಗಿವೆ.
ಆಧುನಿಕತೆಯ ಭರಾಟೆಯ ನಡುವೆಯೂ ಅಪರೂಪದ ದೇಸಿಯ ಗೋತಳಿಗಳನ್ನು ಪ್ರೀತಿಯಿಂದ ಸಾಕಿ, ಹಬ್ಬದ ಸಂದರ್ಭದಲ್ಲಿ ಅವುಗಳನ್ನು ಪೂಜಿಸುವ ಮೂಲಕ ಗೋಸಂರಕ್ಷಣೆ ಹಾಗೂ ಭಾರತೀಯ ಪರಂಪರೆಯ ಮೇಲಿನ ಗೌರವವನ್ನು ಸಾರಿದ ಕೆ. ರಘುಪತಿ ಭಟ್ ಕುಟುಂಬದ ಈ ಆಚರಣೆ ಗಮನ ಸೆಳೆಯಿತು.
ಹಬ್ಬದ ಬೆಳಕಿನೊಂದಿಗೆ ಗೋಮಾತೆಯ ಆರಾಧನೆಯೂ ಮೇಳೈಸಿ, ಸಂಪ್ರದಾಯ ಮತ್ತು ಸಂಸ್ಕೃತಿಯ ಸೊಗಡನ್ನು ಮತ್ತೊಮ್ಮೆ ನೆನಪಿಸಿದ ಸುಂದರ ಕ್ಷಣಗಳಿಗೆ ಈ ಗೋ ಪೂಜೆ ಸಾಕ್ಷಿಯಾಯಿತು.

Swarna jewellery - 4
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments