ಮೂಡುಬಿದಿರೆ : ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಏಕಾಹ ಭಜನಾ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳವಾರ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾಯ೯ಕ್ರಮ ನಡೆಯಿತು.

ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಸಭೆಯಲ್ಲಿ ಆಶೀರ್ವಚನ ನೀಡಿ ಭಗವಂತನ ಅನಂತ ಗುಣಗಳನ್ನು ಭಕ್ತಿಭಾವನೆಯಿಂದ ಹಾಡುವುದೇ ಭಜನೆ. ಭಜನೆಯಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ರಾಗಬದ್ಧವಾಗಿ ಜನ ಮೆಚ್ಚುವುದಕ್ಕೆ ಭಜನೆ ಹಾಡುವುದಕ್ಕಿಂತ ಅನುರಾಗವಾಗಿ ಭಗವಂತ ಮೆಚ್ಚುವಂತೆ ಹಾಡಬೇಕು ಎಂದು ಹೇಳಿದರು.

ಅರಕಲಗೂಡು ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಭಜನೆ ಮನಸ್ಸನ್ನು ಮುದಗೊಳಿಸುತ್ತದೆ. ಭಜನೆಯಿಂದ ಕುಟುಂಬ, ಸಮಾಜದಲ್ಲಿ ಸಂಸ್ಕಾರ ಬೆಳೆಯುತ್ತದೆ. ದೇವರ ಸ್ಮರಣೆಯಿಂದ ಇಹದಲ್ಲಿ ಸುಖ ಪರದಲ್ಲಿ ಮೋಕ್ಷ ಲಭಿಸುತ್ತದೆ ಎಂದರು.
ವೇಲಾಪುರಿ ವಿಶ್ವನಾಥ ಶರ್ಮ ಧಾರ್ಮಿಕ ಉಪನ್ಯಾಸ ನೀಡಿದರು. ಉದ್ಯಮಿ ಅಶೋಕ ಆಚಾರ್ಯ ಎಡಪದವು ಮುಖ್ಯ ಅತಿಥಿಗಾಗಿ ಭಾಗವಹಿಸಿ ಶುಭ ಹಾರೈಸಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ ಬಾಲಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ:
ಭಜನಾ ಸಮಿತಿಯ ಸ್ಥಾಪಕ ಸದಸ್ಯ, ತಬಲಾವಾದಕ ಚಂದಿತ್ಲು ಜಯಂತ ಆಚಾರ್ಯ, ಭಜನಾ ಸಂಚಾಲಕ ಸಾಣೂರು ರಾಮಚಂದ್ರ ಆಚಾರ್ಯ, ಮಹಿಳಾ ಭಜನಾ ಮಂಡಳಿ ಸಂಚಾಲಕಿ ಜಯಂತಿ ಕೇಶವ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಮತ್ತು ಭಜನೆಯಲ್ಲಿ ಸಹಕರಿಸಿದ ೫೦ ಮಂದಿಯನ್ನು ಗೌರವಿಸಲಾಯಿತು. ಕ್ಷೇತ್ರದ ತಂತ್ರಿ ಎನ್ ಕೇಶವ ಆಚಾರ್ಯ,
ಕಾಳಿಕಾಂಬಾ ಸೇವ ಸಮಿತಿ ಅಧ್ಯಕ್ಷ ಬೇಲಾಡಿ ಜಗದೀಶ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಕಸ್ತೂರಿ ದೇವರಾಜ ಆಚಾರ್ಯ, ಅಲಂಗಾರು ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಆಚಾರ್ಯ ಹಾಗೂ ವಿವಿಧ ಭಜನಾ ಮಂಡಳಿಗಳ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಎನ್ ಗಂಟಾಲ್ಕಟ್ಟೆ ವಂದಿಸಿದರು. ಪುರಂದರ ಪುರೋಹಿತ್, ಪತ್ರಕರ್ತ ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರದಲ್ಲಿ ಬೆಳಿಗ್ಗೆ ಗುರುಯಜ್ಞ, ದುರ್ಗಾಹೋಮ ನಡೆಯಿತು.

