ಮೂಡುಬಿದಿರೆ: ಪಿಲಾರು ಪೋಸ್ಟ್ಮನ್ ನಿವಾಸಿ, ನಿವೃತ್ತ ಶಿಕ್ಷಕ ರಮೇಶ್ ಪ್ರಭು (75) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಇವರು ಮೂಡುಬಿದಿರೆ ಸಮೀಪದ ಮಿಜಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, ಬಳಿಕ ಬೆಳ್ಳಮಣ್, ನಂದಿಕೂರು ಹಾಗೂ ಪಲಿಮಾರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಅವರು ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸರಳ ಸ್ವಭಾವದವರಾಗಿದ್ದ ಅವರು ಸ್ಥಳೀಯವಾಗಿ ಉತ್ತಮ ಒಡನಾಟ ಹೊಂದಿದ್ದರು.
ನಿವೃತ್ತ ಶಿಕ್ಷಕ ರಮೇಶ್ ಪ್ರಭು ಪಿಲಾರು ನಿಧನ
RELATED ARTICLES

