HomeFresh Newsಅಧಿಕಾರಿಗಳ ಗೈರು : ಮೊದಲ ಬಾರಿಗೆ ಕಲ್ಲಮುಂಡ್ಕೂರು ಗ್ರಾಮಸಭೆ ರದ್ದು

ಅಧಿಕಾರಿಗಳ ಗೈರು : ಮೊದಲ ಬಾರಿಗೆ ಕಲ್ಲಮುಂಡ್ಕೂರು ಗ್ರಾಮಸಭೆ ರದ್ದು

ಮೂಡುಬಿದಿರೆ : ಜೆಜೆಎಂ ಸಹಿತ ವಿವಿಧ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಲ್ಲಮುಂಡ್ಕೂರು ಗ್ರಾಮಸಭೆ ಮಂಗಳವಾರ ರದ್ದುಗೊಂಡ ಘಟನೆ ನಡೆದಿದೆ.
ಆಡಳಿತಾಧಿಕಾರಿ ಲಿಡ್ವಿನ್ ಫೆನಾ೯ಂಡಿಸ್ ಅವರ ನೇತೃತ್ವದಲ್ಲಿ ಪಂಚಾಯತ್ ನ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಗ್ರಾ. ಪಂ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಅಬ್ಬಯ್ಯ ಪಂಜಾಡಿ ಅವರು ಜೆಜೆಎಂ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಕಾಮಗಾರಿ ಅಧ೯ಂಬಧ೯ವಾಗಿದ್ದು ಟಾಂಕಿಗಳಿಗೆ ಸರಿಯಾಗಿ ನೀರು ಬೀಳುತ್ತಿಲ್ಲ ಈ ಬಗ್ಗೆ ತಮಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

ಮಾಹಿತಿ ನೀಡಬೇಕಾದ ಅಧಿಕಾರಿ ಸಭೆಗೆ ಹಾಜರಾಗದಿರುವುದರಿಂದ ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ, ಸದಸ್ಯರಾದ ಜನಾದ೯ನ ಗೌಡ, ವಸಂತ್ ನಾಯ್ಕ್, ಜೋಯ್ಸನ್ ನೀರುಡೆ, ಗ್ಲೇನ್ ವಿಶಾಲ್ ಡಿ’ಸಿಲ್ವ, ಸಹಿತ ಗ್ರಾಮಸ್ಥರು ಜೆಜೆಎಂಗೆ ಸಂಬಂಧಪಟ್ಟ ಅಧಿಕಾರಿಗಳು ಬರಬೇಕೆಂದು ಆಗ್ರಹಿಸಿದರು.

ಈ ಸಂದಭ೯ ಅಧಿಕಾರಿಯನ್ನು ಮೊಬೈಲ್ ಕರೆಯ ಮೂಲಕ ಸಂಪಕಿ೯ಸಿದಾಗ ಭಾಗವಹಿಸಲು ಆಗುತ್ತಿಲ್ಲವೆಂದು ಹೇಳಿದಾಗ ಆಕ್ರೋಶಗೊಂಡ ಗ್ರಾಮಸ್ಥರು ಸಭೆಯನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದಾಗ ಗ್ರಾಮಸಭೆಯನ್ನು ರದ್ದುಗೊಳಿಸಲಾಯಿತು.
ಹಿಂದುಳಿದ ವಗ೯ಗಳ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಸಂಗಮೇಶ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.

ಪೊಲೀಸ್, ಅರಣ್ಯ, ಶಿಕ್ಷಣ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ಚಂದ್ರ, ಕಾಯ೯ದಶಿ೯ ನವೀನ್ ರಾಬಟ್೯ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments