HomeFresh Newsಹೆಜಮಾಡಿ ಕೋಡಿ: ಬೇಚಾ ಗುರಿಕಾರ ನಿಧನ

ಹೆಜಮಾಡಿ ಕೋಡಿ: ಬೇಚಾ ಗುರಿಕಾರ ನಿಧನ

ಪಡುಬಿದ್ರಿ: ಹೆಜಮಾಡಿ ಕೋಡಿ ನಿವಾಸಿ, ಬೇಚಾ ಗುರಿಕಾರ ಎಂದೇ ಪರಿಸರದಲ್ಲಿ ಜನಪ್ರಿಯರಾಗಿದ್ದ ಚಂದು ಗುರಿಕಾರ (84) ಅವರು ನವೆಂಬರ್ 24ರಂದು ನಿಧನರಾದರು.
ಕೃಷಿ ಹಾಗೂ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಹೆಜಮಾಡಿ ಕೋಡಿಯ ಶ್ರೀ ಬ್ರಹ್ಮ ಮುಗೇರ್ಕಳ ದೇವಸ್ಥಾನದ ಗುರಿಕಾರರಾಗಿ ಹಾಗೂ ಪ್ರಧಾನ ಅರ್ಚಕರಾಗಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ, ದೇವಸ್ಥಾನದ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದರು.
ಇವರ ಸೇವಾವಧಿಯಲ್ಲಿ ದೇವಸ್ಥಾನದಲ್ಲಿ ಮೂರು ಬಾರಿ ಬ್ರಹ್ಮಕಲಶೋತ್ಸವ ನೆರವೇರಿರುವುದು ವಿಶೇಷವಾಗಿದೆ. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದ ಇವರು ಪರಿಸರದ ಜನರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Sudha Furniture - 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments