ಮಂಗಳೂರು: ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದ 14 ವರ್ಷದೊಳಗಿನ ಬಾಲಕರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಕ್ರೀಡಾಪಟು ವಿಹಾನ್ ಚಿನ್ನದ ಪದಕ ಸಾಧಿಸುವ ಮೂಲಕ ಮಿನಿ ಒಲಿಂಪಿಕ್ಸ್ ನ ಅತ್ಯಂತ ವೇಗದ ಓಟಗಾರ ಅನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
ಕರ್ನಾಟಕ ಮಿನಿ ಒಲಿಂಪಿಕ್ಸ್‌ನ ಅತ್ಯಂತ ವೇಗದ ಆಟಗಾರ ಎಂಬ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿರುವ ವಿಹಾನ್ ಅವರ ವೇಗ, ಪರಿಶ್ರಮ, ಶಿಸ್ತು, ಸಮರ್ಪಣೆ ಹಾಗೂ ದೃಢಸಂಕಲ್ಪಕ್ಕೆ ಸಾಧನೆಗೆ ಸಾಕ್ಷಿಯಾಗಿದೆ. ವಿಹಾನ್ ಅವರ ಈ ಅಭೂತಪೂರ್ವ ಸಾಧನೆಗೆ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ ಅಲ್ಮೇಡಾ ಎಸ್. ಜೆ ವಿಹಾನ್ ಸಾಧನೆಯನ್ನು ಶ್ಲಾಘಿಸಿ , ಶುಭ ಹಾರೈಸಿದ್ದಾರೆ. ಉಪ ಪ್ರಾಂಶುಪಾಲರಾದ ಲಾರೆಲ್ ಡಿ’ಸೋಜಾ, ಅಪರ್ಣಾ ಸುರೇಶ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

