HomeFresh Newsಭತ್ತದ ಕೃಷಿಕರೊಂದಿಗೆ ಪತ್ರಕರ್ತರ ಸಾಮೂಹಿಕ ಭತ್ತದ ನಾಟಿ

ಭತ್ತದ ಕೃಷಿಕರೊಂದಿಗೆ ಪತ್ರಕರ್ತರ ಸಾಮೂಹಿಕ ಭತ್ತದ ನಾಟಿ

ನಶಿಸುತ್ತಿರುವ ಭತ್ತದ ಕೃಷಿಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭತ್ತದ ಕೃಷಿಕರೊಂದಿಗೆ ಪತ್ರಕರ್ತರ ಸಾಮೂಹಿಕ ಭತ್ತದ ನಾಟಿ ಕಾರ್ಯಕ್ರಮ ಮಿತ್ತಳಿಕೆಗುತ್ತು ಕುಟುಂಬಸ್ಥರ ಸಹಕಾರದೊಂದಿಗೆ ಅಳಿಕೆ ಗ್ರಾಮದ ಮಿತ್ತಳಿಕೆಯ ಗದ್ದೆಯಲ್ಲಿ ನಡೆಯಿತು .ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಎಚ್.ಜಿ. ಅವರು ನೇಜಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಿತ್ತಳಿಕೆ ಕುಟುಂಬದ ಹಿರಿಯರಾದ ಸುಗಂಧಿ ಆರ್. ಸಾಮಾನಿ ರವರು ದೀಪ ಬೆಳಗಿಸಿ ಗದ್ದೆ ಪೂಜೆ ನೆರವೇರಿಸಿದರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ತಾಲೂಕು ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಅಳಿಕೆ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಕೆ., ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಿತ್ತಳಿಕೆ ಕುಟುಂಬದ ಹಿರಿಯರಾದ ಸಂಕಪ್ಪ ಶೆಟ್ಟಿ, ಸೀತಾರಾಮ ಶೆಟ್ಟಿ, ಡಾ. ಕಿಶೋರ್ ಆಳ್ವ, ಕನ್ಯಾನ ಪಿಡಿಒ ವಿಜಯಶಂಕರ ಆಳ್ವ, ತಿಮ್ಮಪ್ಪ ಶೆಟ್ಟಿ ಅಳಿಕೆಗುತ್ತು, ರೂಪೇಶ್ ರೈ ಅಳಿಕೆಗುತ್ತು,, ಕೇಪು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಸದಾಶಿವ ಅಳಿಕೆ, ಸೂರ್ಯವಂಶ ಪ್ರತಿಷ್ಠಾನದ ಡಾ.ಗೋವರ್ಧನ ರಾವ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಸ್ಕರ ರೈ ಕಟ್ಟ ಮತ್ತು ಪುಷ್ಪರಾಜ ಬಿ.ಎನ್. ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತರು ನೇಜಿ ನೆಟ್ಟು, ಟ್ರಾಕ್ಟರ್ ಉಳುಮೆ ಮಾಡುವ ಮೂಲಕ ಕೃಷಿಯ ಅನುಭವ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments