ಮಂಗಳೂರು; ಎಂಡೋಸಲ್ಪಾನ್ ಭಾದಿತರಾಗಿದ್ದುಕೊಂಡು ಹಾಸಿಗೆ ಹಿಡಿದಿರುವ 210 ಕುಟುಂಬಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ವತಿಯಿಂದ ಸ್ವಚ್ಚಾತ ಕಿಟ್ ಮತ್ತು ಪೌಷ್ಠಿಕ ಆಹಾರ ಕಿಟ್ ನೀಡಲಾಗುತಿದೆ ಎಂದು ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ವಿ ಕಾಲೆ ಹೇಳಿದರು.


ಅವರು ಎಂ.ಆರ್.ಪಿ.ಎಲ್ ಸಂಸ್ಥೆ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಜುಲೈ 1 ರಿಂದ 15 ವರೆಗೆ ನಡೆಯುವ ಸ್ವಚ್ಚತಾ ಪಕ್ವಾಡದ ಅಂಗವಾಗಿ ಎಂಡೋ ಸಲ್ಪಾನ್ ಭಾದಿತರಿಗೆ ಕಿಟ್ ವಿತರಿಸಿ ಮಾತನಾಡಿ ನಿರಂತರ 15 ದಿನಗಳ ಕಾಲ ವಿವಿಧ ಸೇವಾ ಕಾರ್ಯಗಳನ್ನು ಹಮ್ನಿಕೊಂಡಿದ್ದು, ಸ್ಚಚ್ಚತೆಗೆ ಮಹತ್ವ ನೀಡುವ ಕೆಲಸಗಳನ್ನು ಮಾಡುತ್ತಿದ್ದೇವೆ, ಸ್ವಚ್ಚತೆಯ ಬಗ್ಗೆ ಜಾಥಾ, ಬೀದಿ ನಾಟಕ, ಶ್ರಮಾದಾನ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಈ ಸಂದರ್ಭ ಕೊಕ್ಕಡ, ಬೆಳ್ತಂಗಡಿ, ಅರಸಿನಮಕ್ಕಿ ಮತ್ತಿತರ ಕಡೆಗಳಿಗೆ ಸ್ವಚ್ಚತಾ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಂ.ಆರ್.ಪಿ.ಎಲ್ CSR ವಿಭಾಗದ ಅಧಿಕಾರಿ ಕೇಶವ ಪಾಟಾಲಿ, ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ ಸಂಜಾತ್ , ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಪ್ರಕಾಶ್, ಎಂಡೋಸಲ್ಫಾನ್ ನ್ ದ.ಕ ಜಿಲ್ಲಾ ಸಂಯೋಜಕ ಸಜಿವುದ್ದೀನ್ MS ಮತ್ತಿತರರು ಉಪಸ್ಥಿತರಿದ್ದರು.

