HomeFresh Newsಐಪಿಎಲ್ ಮಾದರಿಯಂತೆ ವಾಲಿಬಾಲ್‌ನಲ್ಲೂ ಹೊಸ ಲೀಗ್

ಐಪಿಎಲ್ ಮಾದರಿಯಂತೆ ವಾಲಿಬಾಲ್‌ನಲ್ಲೂ ಹೊಸ ಲೀಗ್

ಕೊಚ್ಚಿನ್: ಐಪಿಎಲ್ ಮಾದರಿಯಂತೆ ವಾಲಿಬಾಲ್‌ನಲ್ಲೂ ಹೊಸ ಲೀಗ್ ಆರಂಭವಾಗಿದ್ದು, ಮೊದಲ ಸೀಸನ್ ನ ಹರಾಜು ಪ್ರಕ್ರಿಯೆ ಇಂದು ಕೊಚ್ಚಿನ್ ನಲ್ಲಿ ನಡೆದಿದೆ. ಮಂಗಳೂರಿನ ಆಟಗಾರ ಅಶ್ವಲ್ ರೈ ಅವರು ದಾಖಲೆಯ ಮೊತ್ತಕ್ಕೆ ಕೋಲ್ಕತ್ತಾ ಥಂಡಲ್ ಬೋಲ್ಟ್ಸ್ ತಂಡದ ಪಾಲಾಗಿದ್ದಾರೆ.

ಅಶ್ವಲ್ ರೈ ಅವರನ್ನು 15 ಲಕ್ಷ ರೂ. ಬೆಲೆಗೆ ಕೋಲ್ಕತ್ತಾ ತಂಡ ಖರೀದಿಸಿತು. ಇವರಂತೆ ಕಾರ್ತಿಕ್ ಎ ಮತ್ತು ಜೆರೋಮ್ ವಿನಿತ್ ಅವರನ್ನು ಪ್ರೈಮ್ ವಾಲಿಬಾಲ್ ಹರಾಜಿನಲ್ಲಿ ಕ್ರಮವಾಗಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಕ್ಯಾಲಿಕಟ್ ಹೀರೋಸ್ ತಂಡಗಳು ರೂ. 15 ಲಕ್ಷ ಖರೀದಿಸಿದವು. ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲೂ ಸ್ಪೈಕರ್ಸ್, ಅಹಮದಾಬಾದ್ ಡಿಫೆಂಡರ್ಸ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಚೆನ್ನೈ ಬ್ಲಿಟ್ಜ್, ಬೆಂಗಳೂರು ಟಾರ್ಪಿಡೋಸ್ ಮತ್ತು ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ಎಂಬ ಏಳು ತಂಡಗಳು ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಭಾಗವಹಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments