HomeFresh Newsಮೂಡುಬಿದರೆಯಲ್ಲಿ ಸ್ಕೌಟ್ಸ್& ಗೈಡ್ಸ್ ಅಂತರಾಷ್ಟ್ರೀಯ ಜಾಂಬೂರಿಗೆ ಭರದ ಸಿದ್ಧತೆ

ಮೂಡುಬಿದರೆಯಲ್ಲಿ ಸ್ಕೌಟ್ಸ್& ಗೈಡ್ಸ್ ಅಂತರಾಷ್ಟ್ರೀಯ ಜಾಂಬೂರಿಗೆ ಭರದ ಸಿದ್ಧತೆ

ಮೂಡುಬಿದರೆ ಆಳ್ವಾಸ್ ಕ್ಯಾಂಪಸ್‍ನಲ್ಲಿ ಡಿಸೆಂಬರ್ 21ರಿಂದ 27ರ ವರೆಗೆ ನಡೆಯಲಿರುವ ಸ್ಕೌಟ್ಸ್ & ಗೈಡ್ಸ್‍ನ ಅಂತರಾಷ್ಟ್ರೀಯ ಸಾಂಸ್ಕøತಿಕ ಜಾಂಬೂರಿಗೆ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವಾ ಅವರು ವಿವರ ನೀಡಿದರು.

JAMBURI

ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜನೆ ಮಾಡಲಾಗಿರುವ ಸ್ಕೌಟ್ಸ್ & ಗೈಡ್ಸ್‍ನ ಅಂತರಾಷ್ಟ್ರೀಯ ಸಾಂಸ್ಕøತಿಕ ಜಾಂಬೂರಿಗೆ ಮೂಡುಬಿದರೆಯ ಅಳ್ವಾಸ್ ಕ್ಯಾಂಪಸ್‍ನಲ್ಲಿ ಎಲ್ಲಾ ಸಿದ್ಧತೆಗಳನ್ನು ಭರದಿಂದ ನಡೆಯುತ್ತಿದೆ.ಆಳ್ವಾಸ್ ಕ್ಯಾಂಪಸ್‍ನ ಬೇರೆ ಬೇರೆ ವೇದಿಕೆಗಳಲ್ಲಿ ಮತ್ತು ಮೈದಾನಗಳಲ್ಲಿ ಹಾಗೂ ಅರಣ್ಯ ಭಾಗದಲ್ಲಿ ಆಯೋಜಿಸಲಾಗುತ್ತಿರುವ ಜಾಂಬೂರಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಸಿದ್ಧತೆಗಳನ್ನು ಆಯಾ ಸ್ಥಳಗಳಿಗೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ದು ಡಾ. ಎಂ. ಮೋಹನ್ ಆಳ್ವ ಅವರು ಶನಿವಾರದಂದು ವಿವರ ನೀಡಿದರು. 50ಸಾವಿರ ವಿದ್ಯಾರ್ಥಿಗಳು ಮತ್ತು 10ಸಾವಿರ ಶಿಕ್ಷಕರು ಮೂರುವರೆ ಸಾವಿರ ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗುತ್ತಿದ್ದಾರೆ. 10 ಹೊರದೇಶಗಳ ಸ್ಕೌಟ್ಸ್ & ಗೈಡ್ಸ್ ಪ್ರತಿನಿಧಿಗಳು ಈ ಜಾಂಬೂರಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಜಾಂಬೂರಿ 5 ಹೊಸ ಮೇಳಗಳನ್ನು ಸಂಯೋಜನೆ ಮಾಡಲಾಗಿದೆ. ವಿಜ್ಞಾನ ಮೇಳ, ಕೃಷಿ ಮೇಳ, ಕಲಾ ಮೇಳ, ಸಾಂಸ್ಕøತಿಕ, ಕ್ರೀಡಾ ಮೇಳಗಳನ್ನು ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಪರಿಚಯಿಸಲಾಗುತ್ತಿದೆ ಎಂದು ಡಾ. ಎಂ. ಮೋಹನ್ ಆಳ್ವಾ ಅವರು ವಿವರ ನೀಡಿದರು.

jamburi

ಸುಮಾರು 35 ಕೋಟಿ ರೂಪಾಯಿ ಅಂದಾಜಿನ ಜಾಂಬೂರಿ ಉತ್ಸವ ಇದಾಗಿದ್ದು, ಸರ್ಕಾರವು ಈಗಾಗಲೇ 10 ಕೋಟಿ ರೂಪಾಯಿಯ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ. ಬಾಕಿ ಉಳಿದ ಮೊತ್ತವನ್ನು ಹಂತಹಂತವಾಗಿ ನೀಡುವ ಭರವಸೆ ನೀಡಿದೆ ಎಂದು ಮೋಹನ್ ಆಳ್ವ ಅವರು ತಿಳಿಸದರು. ಜಾಂಬೂರಿಯ ಆಯೋಜನೆಯಲ್ಲಿ ಕರ್ನಾಟಕ ರಾಜ್ಯ ಸ್ಕೌಟ್ಸ್ ಆಂಡ್ ಗೈಡ್ಸ್‍ನ ಅಧ್ಯಕ್ಷರಾದ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಡಾ. ಮೋಹನ್ ಆಳ್ವ ಅವರು ಈ ಸಂದರ್ಭದಲ್ಲಿ ಹೇಳಿದರು.

jamburi
jamburi

ಈ ಅಂತರಾಷ್ಟ್ರೀಯ ಜಾಂಬೂರಿ ಭಾರತದ ಪ್ರತಿಷ್ಠೆಯ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮವನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಜನತೆ ಹಾಗೂ ಜನಪ್ರತಿನಿಧಿಗಳು ಮತ್ತು ಕಂಪೆನಿಗಳು ಸಂಘ ಸಂಸ್ಥೆಗಳು ಉದಾರ ಮನಸ್ಸಿನಿಂದ ಕೊಡುಗೆಗಳನ್ನು ನೀಡಬೇಕೆಂದು ಡಾ. ಮೋಹನ್ ಆಳ್ವ ಅವರು ಮನವಿ ಮಾಡಿದರು. ಆರ್ಥಿಕ ಸಹಾಯದ ಜೊತೆಗೆ ಊಟೋಪಚಾರಕ್ಕೆ ಸಂಬಂಧಪಟ್ಟ ಸ್ವತ್ತುಗಳನ್ನು ಹೊರೆಕಾಣಿಕೆಯ ರೂಪದಲ್ಲಿ ಕೊಡುಗೆಯಾಗಿ ನೀಡುವಂತೆ ಡಾ. ಎಂ. ಮೋಹನ್ ಆಳ್ವ ಅವರು ಮನವಿ ಮಾಡಿದ್ದಾರೆ. ಈ ಜಾಂಬೂರಿಯಲ್ಲಿ ಸಂಗ್ರಹವಾದ ಮೊತ್ತದಲ್ಲಿ ಖರ್ಚು ಮುಗಿದು ಉಳಿಕೆಯಾದ ಹಣದಲ್ಲಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ 15 ಎಕರೆ ಜಾಗದಲ್ಲಿ ಈ ಅಂತರಾಷ್ಟ್ರೀಯ ಸಾಂಸ್ಕøತಿಕ ಜಾಂಬೂರಿಯ ಸ್ಮರಣಾರ್ಥವಾಗಿ ಯುವ ತರಬೇತಿ ಕೇಂದ್ರವನ್ನು ನಿರ್ಮಿಸುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ ಈ ಕಾರಣಕ್ಕಾಗಿ ಈ ಜಾಂಬೂರಿಗೆ ಜನತೆ ಉದಾರ ಮನಸ್ಸಿನಿಂದ ಕೊಡುಗೆಯನ್ನು ನೀಡುವಂತೆ ಡಾ. ಎಂ. ಮೋಹನ್ ಆಳ್ವಾ ಅವರು ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments