HomeFresh Newsಕಾಸರಗೋಡು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ  ತುಳು ಲಿಪಿ ನಾಮಫಲಕ ಅನಾವರಣ

ಕಾಸರಗೋಡು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ  ತುಳು ಲಿಪಿ ನಾಮಫಲಕ ಅನಾವರಣ

ಅನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ  ತುಲು ಲಿಪಿ ನಾಮಫಲಕದ ಅನಾವರಣ ಮಾಡಲಾಯಿತು. ದೇವಸ್ಥಾನದ ತುಲು ಲಿಪಿ ನಾಮಫಲಕದ ಉದ್ಘಾಟನೆಯನ್ನು ಅನಂತಪುರ ಕ್ಷೇತ್ರದ ಆಡಳಿತ ಮುಖ್ಯಸ್ಥರಾದ ಉದಯಕುಮಾರ್ ಗಟ್ಟಿ ಇವರು ನೆರವೇರಿಸಿದರು. ಕಾರ್ಯಕ್ರಮಕ್ಕೆ  ಜೈ ತುಲುನಾಡು (ರಿ.) ಸಂಘಟನೆಯ ಉಪಾಧ್ಯಕ್ಷರಾದ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ತುಳು ವರ್ಲ್ಡ್ (ರಿ.) ಮಂಗಳೂರು ಇದರ ಅಧ್ಯಕ್ಷರು ರಾಜೇಶ್ ಆಳ್ವ, ಕಾರ್ಯದರ್ಶಿ  ಭಾಸ್ಕರ ಕಾಸರಗೋಡು ಹಾಗೂ ತುಳು ಸಾಹಿತಿ, ಕವಿ ವಿಜಯರಾಜ್ ಪುಣಿಂಚಿತ್ತಾಯ ಪಾಲ್ಗೊಂಡಿದ್ದರು . ಕಾರ್ಯಕ್ರಮಕ್ಕೆ ಜೈ ತುಲುನಾಡು (ರಿ.) ಕಾಸರಗೋಡು ಘಟಕದ ಕಾರ್ಯದರ್ಶಿ ಕಾರ್ತಿಕ್ ಕೆ.ಎನ್. ಸ್ವಾಗತವನ್ನು ಮಾಡಿದರು,ಜೈ ತುಲುನಾಡು (ರಿ.) ಕಾಸರಗೋಡು ಘಟಕದ ಸಂಚಾಲಕರಾದ ಶ್ರೀನಿವಾಸ ಆಳ್ವ ಕಳತ್ತೂರು ಧನ್ಯವಾದಗೈದರುಜೊತೆ ಕಾರ್ಯದರ್ಶಿ ಜಗನ್ನಾಥ್ ಕುಲಾಲ್ ಹಾಗೂ ಖಜಾಂಜಿ ಉತ್ತಮ್ ಯು ಉಪಸ್ಥಿತರಿದ್ದರು 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments