HomeFresh Newsಉಳ್ಳಾಲ : ಮನೆಯೊಳಗಡೆ ನೇಣುಬಿಗಿದು ಆತ್ಮಹತ್ಯೆ

ಉಳ್ಳಾಲ : ಮನೆಯೊಳಗಡೆ ನೇಣುಬಿಗಿದು ಆತ್ಮಹತ್ಯೆ

ಉಳ್ಳಾಲ: ಯುವಕನೋರ್ವ ಮನೆಯೊಳಗಡೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ.ನಗರದಲ್ಲಿ ಸಂಭವಿಸಿದೆ.ರಶೀದಾ ಭಾನು ಎಂಬವರ ಪುತ್ರ ಮೊಹಮ್ಮದ್‌ ನೂಹ್ಮನ್‌ (19) ಆತ್ಮಹತ್ಯೆಗೈದವರು. ಖಿನ್ನತೆಗೆ ಒಳಗಾಗಿದ್ದ ನೂಹ್ಮನ್‌ ಮನೆಯ ಒಳಗಡೆ ಕೊಠಡಿಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಮಂದಿ ಬಾಗಿಲು ಒಡೆದು ನೋಡಿದಾಗ ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಐವರು ಸಹೋದರಿಯರಿಗೆ ಓರ್ವನೇ ಸಹೋದರನಾಗಿದ್ದ . ಖಿನ್ನತೆಗೆ ಕಾರಣ ತಿಳಿದುಬಂದಿಲ್ಲ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments