ಬಿ.ಸಿ ರೋಡ್ : ಆನಿಯಾ ದರ್ಬಾರ್ ಡಿಲಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ ಇವರ ನೂತನ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಬಿ.ಸಿ.ರೋಡಿನ ಸ್ಮಾರ್ಟ್‍ಸಿಟಿ ಕಟ್ಟಡದ ನೆಲ ಅಂತಸ್ತಿನಲ್ಲಿ ಶುಭಾರಂಭಗೊಂಡಿತು.

ಬಿ.ಸಿ.ರೋಡಿನಲ್ಲಿ ಈಗಾಗಲೇ ಆನಿಯಾ ದರ್ಬಾರ್ ಹೋಟೇಲ್ ಕಾರ್ಯಚರಿಸುತ್ತಿದ್ದು ಶುಚಿ ರುಚಿಯಾದ ಊಟೋಪಚಾರ ಹಾಗೂ ಗ್ರಾಹಕ ಸ್ನೇಹಿ ಸೇವೆಯಿಂದಾಗಿ ತಾಲೂಕಿನಾದ್ಯಂತ ಮನೆಮಾತಾಗಿದೆ. ಇದೀಗ ಇದೇ ಸಂಸ್ಥೆಯ ಹವಾನಿಯಂತ್ರಿತ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಗ್ರಾಹಕ ಸೇವೆಗಾಗಿ ಸ್ಮಾರ್ಟ್‍ಸಿಟಿ ಕಟ್ಟಡದಲ್ಲಿ ಕಾರ್ಯರಂಭಗೊಂಡಿದೆ.

ಸಯ್ಯದ್ ಹುಸೈನ್ ಬಹಲವಿ ತಂಙಲ್ ಕುಕ್ಕಾಜೆ ನೂತನ ಹೊಟೇಲ್ ಉದ್ಘಾಟಿಸಿದರು. ಈ ಸಂದರ್ಭ ಧರ್ಮಗುರುಗಳಾದ ಇರ್ಷಾದ್ ದಾರಿಮಿ ಅಲ್ ಜಝಾರಿ ಮಿತ್ತಬೈಲ್, ಅಶ್ರಫ್ ಫೈಝಿ, ಖತೀಬರು ಮಿತ್ತಬೈಲ್, ಎಂ.ಕೆ. ಅಝೀಝ್ ಹಮ್ಜದಿ ಮಾವಿನಕಟ್ಟೆ, ಡಾ. ಹಝ್ರತ್ ಫಾಝಿಲ್ ರಝ್ವಿ, ಕಾವಲಕಟ್ಟೆ , ಅಬ್ದುಲ್ ರಝಾಕ್ ಸಖಾಫಿ, ಮಡಂತ್ಯಾರ್, ಹುಸೈನ್ ಸಹದಿ ಆಲದಪದವು, ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸುಲೋಚನ ಜಿ.ಕೆ ಭಟ್, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಸಂಜೀವ ಪೂಜಾರಿ ಬಿರ್ವ ಸೆಂಟರ್ ಪುರಸಭೆ ಸದಸ್ಯ ಮೋನಿಶ್ ಅಲಿ, ಬಂಟ್ವಾಳ ಪುರಸಭೆ ಅಧ್ಯಕ್ಷ ಶರೀಫ್ ಶಾಂತಿಯಂಗಡಿ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಮತ್ತಿತರ ಗಣ್ಯರು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭ ಆನಿಯಾ ಗ್ರೂಪ್ ಆಫ್ ಹೋಟೆಲ್ಸ್‍ನ ಮಾಲೀಕ ಹಂಝ ಎ ಬಸ್ತಿಕೋಡಿ ವಾಮದಪದವು ಎಲ್ಲರನ್ನೂ ಬರಮಾಡಿಕೊಂಡರು.

ಆನಿಯಾ ದರ್ಬಾರ್ ಡಿಲಾಕ್ಸ್ ನಲ್ಲಿ ಇಂಡಿಯನ್, ಅರೇಬಿಯನ್, ಅಪ್ಘಾನ್, ಚೈನೀಸ್, ಸೀಪುಡ್ ಗಳು ಲಭ್ಯವಿದೆ. ಆಹಾರ ಪ್ರಿಯರ ಬಾಯಲ್ಲಿ ನೀರೂರಿಸುವ ಚಿಕನ್, ಮಟನ್, ವೆಜ್ ಬಿರಿಯಾನಿಗಳು, ಸೂಪ್, ತಂದೂರಿ, ಕಬಾಬ್, ಡ್ರೈ ಐಟಂಗಳು, ಸಲಾಡ್, ರೋಟಿ, ಬಗೆಬಗೆಯ ಐಸ್ಕ್ರೀಂ, ಫ್ರೆಶ್ ಜ್ಯೂಸ್, ಮಿಲ್ಕ್ ಶೇಕ್, ವಿವಿಧ ಖಾದ್ಯಗಳು ಹಾಗೂ ತಂಪು ಪಾನೀಯಗಳು ಇಲ್ಲಿ ಲಭ್ಯವಿದೆ. ಹೊಟೇಲ್ ಮಾಲೀಕ ಹಂಝ ಬಸ್ತಿಕೋಡಿ ಅವರ ಹೊಸ ಪರಿಕಲ್ಪನೆಯ ಹೊಟೇಲ್ ಗ್ರಾಹಕರ ಮನೆ ಗೆದ್ದಿದ್ದು ನುರಿತ ಬಾಣಸಿಗರ ತಂಡ ಶುಚಿ ರುಚಿಯಾದ ಆಹಾರ ನೀಡಲು ಸಿದ್ದವಾಗಿದೆ.

Related Posts

Leave a Reply

Your email address will not be published.