Home Posts tagged #ullala

ಉಳ್ಳಾಲ: ಗಾಂಜಾ ಮತ್ತಿನಲ್ಲಿ ದಾಂಧಲೆ: ಸಾರ್ವಜನಿಕರಿಂದ ತರಾಟೆ, ಪೊಲೀಸರಿಂದ ಬಂಧನ

ಉಳ್ಳಾಲ: ಗಾಂಜಾ ವ್ಯಸನಿಯೋರ್ವ ನಶೆಯಲ್ಲಿ ಸಾರ್ವಜನಿಕರತ್ತ ಜಲ್ಲಿ ಕಲ್ಲೆಸೆದು ದಾಂಧಲೆ ನಡೆಸಿದ್ದು, ತಡೆಯಲು ಹೋದ ವ್ಯಕ್ತಿಗೆ ಸೋಡಾ ಬಾಟಲಿಯಿಂದ ಹಲ್ಲೆಗೈದಿದ್ದಾನೆ. ಧಾಂದಲೆಕೋರನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.ಮಂಚಿಲ ನಿವಾಸಿ ಮಹಮ್ಮದ್ ಮುಶ್ತಾಕ್ ಯಾನೆ ಮಿಸ್ತ ಎಂಬಾತ ಶುಕ್ರವಾರ

ಉಳ್ಳಾಲ: ಯುವಕನ ಕೊಲೆಯತ್ನ : ಆರೋಪಿ ಬಂಧನ

ಉಳ್ಳಾಲ: ಬೈಕಲ್ಲಿ ಚಲಿಸುತ್ತಿದ್ದ ಯುವಕನ ತಡೆದು ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ರಾ.ಹೆ.66 ರ ಕೊಲ್ಯ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದ್ದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.ಕುಂಪಲ ನಿವಾಸಿ ಮಹಮ್ಮದ್ ಆರೀಫ್(29)ಇರಿತಕ್ಕೊಳಗಾದ ಯುವಕ.ಆರೀಫ್ ಶುಕ್ರವಾರ ಬೆಳಿಗ್ಗೆ ಕೊಲ್ಯದಿಂದ-ಕುಂಪಲದ ಕಡೆಗೆ ಹೆದ್ದಾರಿಯಲ್ಲಿ ವಿರುದ್ಧ ಧಿಕ್ಕಲ್ಲಿ ಸಂಚರಿಸುತ್ತಿದ್ದ ವೇಳೆ ಕುಂಪಲದಿಂದ-ಕೊಲ್ಯ ಕಡೆಗೆ ಬೈಕಿನಲ್ಲಿ

ಉಳ್ಳಾಲ: ಸಿಪಿಐಎಂ ಹಿರಿಯ ಮುಖಂಡ ನಾರಾಯಣ ತಲಪಾಡಿ ನಿಧನ

ಉಳ್ಳಾಲ: ಸಿಪಿಐಎಂ ಪಕ್ಷದ ಹಿರಿಯ ಮುಖಂಡ ತಲಪಾಡಿ ನಾರ್ಲ ನಿವಾಸಿ ನಾರಾಯಣ ತಲಪಾಡಿ( 68) ಹೃದಯಾಘಾತದಿಂದ ಇಂದು ನಿಧನ ಹೊಂದಿದರು. ಪಕ್ಷದ ಚಟುವಟಿಕೆ ನಿಮಿತ್ತ ಉಪ್ಪಳದ ಮುಖಂಡರೊಬ್ಬರ ಮನೆಗೆ ತೆರಳಿ ವಾಪಸ್ಸಾಗುವಾಗ ಹೃದಯಾಘಾತ ಉಂಟಾಗಿದೆ.ಇವರು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಸದಸ್ಯರು, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸದಸ್ಯರು, ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ವಲಯ ಸಮಿತಿ ಸದಸ್ಯ, ಕೆಪಿಆರ್ ಎಸ್ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯರು, ಕೋಟೆಕಾರು

ಮಂಗಳೂರಿನಲ್ಲಿ ಪೈಪ್ ಹಾನಿ, ಒಂದು ವಾರ ಉಳ್ಳಾಲಕ್ಕೆ ನೀರಿಲ್ಲ

ಉಳ್ಳಾಲ: ಮಂಗಳೂರಿ‌ನ ಪಡೀಲ್ ಸಮೀಪ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಒಡೆದ ಪರಿಣಾಮ ದುರಸ್ತಿ ಕಾರ್ಯಕ್ಕಾಗಿ ಉಳ್ಳಾಲ ನಗರಕ್ಕೆ ಒಂದು ವಾರದ ಕಾಲ ನೀರು ಸರಬರಾಜು ಇರುವುದಿಲ್ಲ ಎಂದು ಉಳ್ಳಾಲ ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.ಫೆ. 6 ರಂದು ಪಂಪ್ವೆಲ್ ಮಹಾವೀರ ವೃತ್ತ ಸಮೀಪದ ಪಡೀಲ್ ರೋಹನ್ ಸ್ಕ್ವೇರ್‌ ಕಟ್ಟಡದ ಮುಂಭಾಗದಲ್ಲಿ ತುಂಬೆ ಅಣೆಕಟ್ಟಿನಿಂದ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಹಾನಿಯಾಗಿದೆ. ಈ ನಿಟ್ಟಿನಲ್ಲಿ

ಉಳ್ಳಾಲ: ‘ಕವಿಯಲ್ಲ-ನಾನೊಬ್ಬ ಹಾಡುಗಾರ’ ಕವನ ಸಂಕಲನ ಬಿಡುಗಡೆ

ಉಳ್ಳಾಲ: ಮೇಲ್ತೆನೆ’ ಸಂಘಟನೆ ಪ್ರಕಟಿಸಿದ ಕವಿ ಬಶೀರ್ ಅಹ್ಮದ್ ಕಿನ್ಯಾ ರಚಿಸಿರುವ ‘ಕವಿಯಲ್ಲ-ನಾನೊಬ್ಬ ಹಾಡುಗಾರ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು. ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಸ್ಥಾಪಕಾಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ಬಶೀರ್ ಅಹ್ಮದ್ ಕಿನ್ಯಾ ರಚಿಸಿರುವ ‘ಕವಿಯಲ್ಲ-ನಾನೊಬ್ಬ ಹಾಡುಗಾರ’ ಕವನ ಸಂಕಲನ ಬಿಡುಗಡೆಗೊಸಿದರು. ಬಳಿಕ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ಅಧಿಕ

ಕೊಣಾಜೆ : ಯುವತಿ ನಾಪತ್ತೆ

ಉಳ್ಳಾಲ: ಮನೆ ಕೆಲಸಕ್ಕಿದ್ದ ಯುವತಿ ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹಾವೇರಿ ಸವಣೂರು ಮಾರುತಿಪುರ ನಿವಾಸಿ ಪೂಜಾ ಲಮಾಣಿ (20) ನಾಪತ್ತೆಯಾದವರು. ಕೊಣಾಜೆ ಕಕ್ಕೆಮಜಲು ನಿವಾಸಿ ಕುಟುಂಬವೊಂದು ಅನಾರೋಗ್ಯದಲ್ಲಿರುವ ಪ್ರಾಯಸ್ತರನ್ನು ನೋಡಿಕೊಳ್ಳಲು ಖಾಸಗಿ ಏಜೆನ್ಸಿ ಮೂಲಕ ಕೆಲಸಕ್ಕೆ ಇಟ್ಟುಕೊಂಡಿದ್ದು, ತಿಂಗಳಿಗೆ 20,000 ರೂ ಏಜೆನ್ಸಿಗೆ ಪಾವತಿಸುತ್ತಿದ್ದರು. ಫೆ.1 ರಂದು ಸಂಜೆ 3 ಕ್ಕೆ ಮನೆಯಿಂದ ಹೊರಹೋದಾಕೆ ನಂತರ

ಉಳ್ಳಾಲ : ಪಿಕಪ್- ಗೂಡ್ಸ್ ಲಾರಿ ನಡುವೆ ಅಪ್ಪಚ್ಚಿಯಾದ ಕಾರು

ಉಳ್ಳಾಲ : ಪಿಕಪ್ ವಾಹನವೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಅದರ ಹಿಂಬದಿಗೆ ಗುದ್ದಿದ ಸ್ಬಿಫ್ಟ್ ಕಾರಿಗೆ ಅದರ ಹಿಂದುಗಡೆಯಿದ್ದ ಗೂಡ್ಸ್ ಲಾರಿ ಢಿಕ್ಕಿ ಹೊಡೆದು ಎರಡು ವಾಹನಗಳ ನಡುವೆ ಸಿಲುಕಿದ ಕಾರು ಅಪ್ಪಚ್ಚಿಯಾದ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸಂಭವಿಸಿದೆ. ದೇರಳಕಟ್ಟೆ ಕಡೆಯಿಂದ ಕೆಲಸ ಮುಗಿಸಿ ಮಂಗಳೂರಿನತ್ತ ಮೂವರು ಯುವತಿಯರಿದ್ದ ಕಾರು ತೆರಳುವಾಗ , ಜನದಟ್ಟಣೆ ತೊಕ್ಕೊಟ್ಟು ರಿಕ್ಷಾ ಪಾಕ್೯ ಸಮೀಪದಲ್ಲೇ ಎದುರುಗಡೆಯಿದ್ದ ಪಿಕಪ್ ವಾಹನದ ಚಾಲಕ ಹಠಾತ್

ದೇರಳಕಟ್ಟೆ: ಕಣಚೂರು ಸಮೂಹ ಸಂಸ್ಥೆ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಕಣಚೂರು ಸಮೂಹ ಸಂಸ್ಥೆಯ ವತಿಯಿಂದ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಕಣಚೂರು ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಹಾಜಿ ಯು.ಕೆ.ಮೋನುರವರು ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಗಣರಾಜ್ಯೋತ್ಸವ ದಿನದ ಸಂದೇಶ ನೀಡಿದರು. ಕಣಚೂರು ಪಬ್ಲಿಕ್ ಸ್ಕೂಲ್‌ನ ೮ನೇ ತರಗತಿಯ ವಿದ್ಯಾರ್ಥಿನಿಯಾದ ಫಾತಿಮ ಶರ್ಮಿನ್ ಸಂವಿಧಾನದ ಕರಡು ಸಮಿತಿಯ ರಚನೆ ಮತ್ತು ಪ್ರಜಾಪ್ರಭುತ್ವದ ಅಸ್ಥಿತ್ವದ ಕುರಿತು ಮಾತನಾಡಿದರು. ಕಣಚೂರು ಇನ್ಸ್ಟಿಟ್ಯೂಟ್ ಆಫ್ ಅಲೈಯ್ಡ್

ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಮೃತರು. ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಮಹೇಶ್ 43 ನಂಬರಿನ ಸಿಟಿ ಬಸ್‌ನಲ್ಲಿ ಚಾಲಕರಾಗಿದ್ದ ಇವರು,  ಇಂದು ನಸುಕಿನ ಜಾವ ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ

ಉಳ್ಳಾಲ : ಚೂರಿ ಇರಿದು ಯುವಕನ ಹತ್ಯೆ

ಉಳ್ಳಾಲ: ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತಕಾಲನಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಸಾರಸ್ವತಕಾಲನಿ ನಿವಾಸಿ ವರುಣ್ (28) ಹತ್ಯೆಯಾದವರು. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೆÇಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ ಐದು