HomeFresh Newsನೀರಿಗೆ ಬಿದ್ದ ಐಫೋನ್ ಹುಡುಕಿಕೊಟ್ಟ ಮುಳುಗುತಜ್ಞ ಈಶ್ವರ್ ಮಲ್ಪೆ!

ನೀರಿಗೆ ಬಿದ್ದ ಐಫೋನ್ ಹುಡುಕಿಕೊಟ್ಟ ಮುಳುಗುತಜ್ಞ ಈಶ್ವರ್ ಮಲ್ಪೆ!

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್‍ನಲ್ಲಿ ಹೂಳು ತುಂಬಿಕೊಂಡಿದ್ದು ಕಾಲು ಜಾರಿ ಬಿದ್ದ ಮನುಷ್ಯನ ಮೃತದೇಹವೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರು ಅಂತಹ ಅಪಾಯಕಾರಿ ಬೇಸಿನ್‍ಗೆ ಧುಮುಕಿ 1.5 ಲಕ್ಷ ರೂ. ಮೌಲ್ಯದ ಐ-ಫೆÇೀನ್ ಮೊಬೈಲ್ ಹುಡುಕಿ ಮೇಲೆ ತಂದಿದ್ದಾರೆ.

ಬೆಳಗ್ಗೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ 1.5 ಲಕ್ಷ ರೂ. ಮೌಲ್ಯದ ಐ-ಫೆÇೀನ್ ಮೊಬೈಲ್ ಜೆಟ್ಟಿ ಬಳಿ ಬೇಸಿನ್ನ ನೀರಿಗೆ ಬಿದ್ದಿತ್ತು. ಮೊಬೈಲ್ ಕಳೆದುಕೊಂಡು ಚಿಂತಿತರಾದ ಅವರು ಬೇರೆಯವರ ಸಹಾಯದಿಂದ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ತತ್ಕ್ಷಣ ಧಾವಿಸಿ ಬಂದ ಈಶ್ವರ್ ಮಲ್ಪೆ ನೀರಿನ ಆಳದಲ್ಲಿ ಹುಡುಕಾಟ ನಡೆಸಿ ಪತ್ತೆಹಚ್ಚಿ ಮೊಬೈಲನ್ನು ಹೊರತೆಗೆದು ವಾರಸುದಾರರಿಗೆ ನೀಡಿದರು. ನೆರೆದಿದ್ದ ಜನ ಈಶ್ವರ್ ಅವರ ಚಾಕಚಕ್ಯತೆಯನ್ನು ಕೊಂಡಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments