ಜನಸ್ನೇಹಿ ತಹಶೀಲ್ದಾರರಿಗೆ ಕೊರಗ ಸಂಘಟನೆಯಿಂದ ಬೀಳ್ಕೊಡುಗೆ
ಕಳೆದ 2 ವರ್ಷದಿಂದ ಬ್ರಹ್ಮಾವರ ತಹಶೀಲ್ದಾರರಾಗಿ ಇದೀಗ ಪದೊನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಗೊಂಡ ರಾಜಶೇಖರ ಮೂರ್ತಿಯವರನ್ನು ಕೊರಗ ಅಭಿವೃದ್ಧಿ ಸಂಘ ಮಟಪಾಡಿ ಬಲ್ಜಿ ಮತ್ತು ಹುಭಾಶಿಕ ಕೊರಗರ ಯುವ ಕಲಾ ವೇದಿಕೆ ಬಾರಕೂರು ವತಿಯಿಂದ ಕೊರಗ ಭವನದಲ್ಲಿ ಸನ್ಮಾನಿಸಿ ಬಿಳ್ಕೋಡುಗೆ ಮಾಡಲಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ ಶೇಖರ ಮೂರ್ತಿಯವರು ಕರಾವಳಿಯ ಮೂಲ ನಿವಾಸಿಗಳಾದ ಕೊರಗರು ದೇಹ ಶಕ್ತಿಯ ಜೊತೆಗೆ ಬುದ್ಧಿ ಶಕ್ತಿಗೆ ನೆರವಾಗುವ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ, ಜ್ಞಾನವಂತರಾದವರು ಪ್ರಪಂಚದ ಎಲ್ಲಾ ಭಾಗದಲ್ಲಿ ಉತ್ತಮ ಅವಕಾಶ ಮತ್ತು ಮಾನ್ಯತೆ ಪಡೆಯ ಬಲ್ಲರು ಎಂದರು.ಕೊರಗ ಸಮುದಾಯದವರ ಡೋಲು ವಾದನದೊಂದಿಗೆ ಸಾಂಪ್ರದಾಯಕ ಬೆತ್ತದ ಬುಟ್ಟಿಯಲ್ಲಿ ಫಲ ವಸ್ತುವಿನೊಂದಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕೊರಗ ಸಂಘಟನೆಯ ಮುಖಂಡ ಗಣೇಶ್ ಕೊರಗ ಬಾರಕೂರು, ಉದ್ಯಮಿ ಎಸ್ ನಾರಾಯಣ , ಶಿಕ್ಷಕಿಯರಾದ ವಿನಿತಾ, ನವ್ಯ ,ಕೊರಗ ಮುಖಂಡರುಗಳಾದ ಗಣೇಶ್ ಕೊರಗ ಕುಂದಾಪುರ , ಶೇಖರ ಮರವಂತೆ ಮತ್ತು ಅಶ್ವಿನಿ ಉಪಸ್ಥಿತರಿದ್ದರು.