HomeFresh Newsಶಂಕರನಾರಾಯಣ ಹೊಕ್ಕ ಮೂರು ಜಿಲ್ಲೆಯ ಕಳ್ಳರು

ಶಂಕರನಾರಾಯಣ ಹೊಕ್ಕ ಮೂರು ಜಿಲ್ಲೆಯ ಕಳ್ಳರು

ಮೂರು ಜಿಲ್ಲೆಗಳ ಮೂವರು ಕಳ್ಳರು ಸೇರಿ ಕುಂದಾಪುರ ತಾಲೂಕಿನ ಶಂಕರನಾರಾಯಣದ ಗೋಳಿಕಟ್ಟೆಯಲ್ಲಿನ ಬಿಎಸ್ಎನ್ಎಲ್ ಟವರ್ ಹೊಕ್ಕು ಬ್ಯಾಟರಿ ಬಾಕ್ಸ್ ಕದ್ದಿದ್ದರು. ಮೂವರನ್ನೂ ಬಂಧಿಸಿದ ಪೋಲೀಸರು ಕುಂದಾಪುರ ನ್ಯಾಯಾಲಯದಲ್ಲಿ ನಿಲ್ಲಿಸಿ, ಜೈಲಿಗೆ ಕಳುಹಿಸಿದ್ದಾರೆ.

ಉಡುಪಿ ಉದ್ಯಾವರ ಪಿತ್ರೋಡಿಯ 45ರ ಬಾಲಕೃಷ್ಣ, ಬಂಟ್ವಾಳ ಫರಂಗಿಪೇಟೆಯ 38ರ ಬದ್ರುದ್ದೀನ್, ಹೊನ್ನಾವರ ಕರ್ಕಿ ಮೂಲದ ಉಡುಪಿ ಲಕ್ಷ್ಮಿನಗರ ನಿವಾಸಿ 36ರ ಉಸ್ಮಾನ್ ಬಂಧಿತರು.

ಅವರಿಂದ ಬ್ಯಾಟರಿ ಸಾಗಿಸಲು ಬಳಸಿದ ಪಿಕಪ್ ಸಹಿತ 4,60,000 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments