ಸಂಗಮ ತುಳು ದ್ರಾವಿಡಕ್ಕೆ ಸಾಕ್ಷಿಯಲ್ಲ
ಸಂಗಮ ಮತ್ತು ಮಂಗಲ ಬೆರೆತ ಊರುಗಳೆಲ್ಲ ನದಿ ತೊರೆಗಳ ಕೂಡು ಸ್ಥಳಗಳಾಗಿವೆ. ಕೋರಮಂಗಲ, ಪಾಣೆಮಂಗಳೂರು, ನೆಲಮಂಗಲಗಳೂ ಅದಕ್ಕೆ ಹೊರತಲ್ಲ.
ಆದರೆ ಕೂಡಲ ದ್ರಾವಿಡ ನುಡಿ ಎನಿಸಿದವುಗಳಲ್ಲ. ಕುಡಲ ಕುಡ್ಲ ಯಾವುದು ಸರಿ ಎಂಬ ಪ್ರಶ್ನೆ ಸಹಜ. ಇವು ಎರಡೂ ಸರಿಯಾದರೂ ಅವು ಮೂಲ ಅಲ್ಲ.ಕೂಡು ಅಲ> ಕೂಡಾಲ> ಕೂಡಲ> ಕುಡಲ> ಕುಡ್ಲ > ಎಂಬ ದಾರಿಯಲ್ಲಿ ಇದು ಬಂದಿದೆ.
ಇಲ್ಲಿ ಅಲ ಎಂದರೆ ನೀರಿನ ಹೆಜ್ಜೆ. ಎರಡು ನೀರಿನ ಹೆಜ್ಜೆಗಳು ಸೇರುವ ಸ್ಥಳವೇ ಕೂಡಲ.
ತೆಂಕಣ ಭಾರತದಲ್ಲಿ ಕೂಡಲಗಿ, ಕೂಡಲಿ, ಕುಡ್ಲಿ ಎಂದು ಇಂಥ ನೂರಾರು ನದಿ ತೊರೆ ಸೇರುಗೆ ಸ್ಥಳಗಳು ಇವೆ. ಅದೇ ರೀತಿ ಸಂಗಮ ಮತ್ತು ಮಂಗಲ ಶಬ್ದ ಬಳಕೆ ಆಗಿವೆ. ಎರಡೂ ದ್ರಾವಿಡ ಮೂಲದ್ದಲ್ಲ.