HomeFresh Newsಕಾಪು : ಡಿ.15ರಂದು ತನಿಯಾ ಮೋಟಾರ್ಸ್ ಸೂಪರ್ ಆಟೋ ಶೋರೂಂ ಉದ್ಘಾಟನೆ

ಕಾಪು : ಡಿ.15ರಂದು ತನಿಯಾ ಮೋಟಾರ್ಸ್ ಸೂಪರ್ ಆಟೋ ಶೋರೂಂ ಉದ್ಘಾಟನೆ

ಮೊಂಟ್ರಾ ಇಲೆಕ್ಟ್ರಿಕ್ ಅಧಿಕೃತ ಡೀಲರ್‌ನ ತನಿಯಾ ಮೋಟಾರ್ಸ್ ಸೂಪರ್ ಆಟೋ ಶೋರೂಂ ಕಾಪುವಿನ ಕೊಪ್ಪಲಂಗಡಿಯ ಸ್ವಸ್ತಿಕ್ ಎನ್‌ಕ್ಲೇವ್‌ನಲ್ಲಿ ಡಿಸೆಂಬರ್ 15ರಂದು ಶುಭಾರಂಭಗೊಳ್ಳಲಿದ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಉತ್ಪಾದನೆ ಹೆಚ್ಚಾಗಿದೆ. ಕಾರು, ಸ್ಕೂಟರ್, ಬೈಕ್ ಹಾಗೂ ತ್ರಿಚಕ್ರ ವಾಹನಗಳ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಿದೆ. ಇದೀಗ ಪ್ರತಿ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ಈ ರಿಕ್ಷಾವನ್ನು ಒಂದು ಬಾರಿ ಚಾರ್ಜ್ ಮಾಡಿದರೆ 197 ಕಿಲೋ ಮೀಟರ್‌ಗಳ ಅತ್ಯುತ್ತಮ ಮೈಲೇಜ್ ರೇಂಜ್ ಒದಗಿಸುತ್ತದೆ. ಸರಾಗವಾಗಿ ಉತ್ತಮ ಚಾಲನೆಗೆ ಸಹಾಯವಾಗುವ ಪಾರ್ಕ್ ಅಸಿಸ್ಟ್ ಮೋಡ್‌ಗಳನ್ನು ಅಳವಡಿಸಲಾಗಿದೆ. ಮೊಂಟ್ರಾ ಇಲೆಕ್ಟ್ರಿಕ್ ೩ಡಬ್ಲ್ಯುಅನ್ನು ಉತ್ತಮ ಸಾಮಗ್ರಿಗಳಿಂದ ತಯಾರಿಸಲಾಗಿದೆ. ಕಾರ್‌ನಂಥ ಚಾಲಕ ಆಸನ ಮತ್ತು ಉತ್ತಮ ಕುಷನಿಂಗ್ ಇದೆ. ಮೊಂಟ್ರಾ ಇಲೆಕ್ಟ್ರಿಕ್ 3ಡಬ್ಲ್ಯು ಚಾಲಕ ಮತ್ತು ಪ್ರಯಾಣಿಕರಿಗೆ ಅಗತ್ಯವಾದ ಎಲ್ಲ ಸ್ಥಳಾವಕಾಶವನ್ನು ಹೊಂದಿದೆ. ಲಗೇಜ್‌ಗೆ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿರುವುದು ಈ ವಿಭಾಗದ ವಿಶೇಷವಾಗಿದೆ.

ಇದೀಗ ಡಿಸೆಂಬರ್ 15ರಂದು ನೂತನ ಶೋರೂಂ ಕಾಪುವಿನ ಕೊಪ್ಪಲಂಗಡಿಯ ಸ್ವಸ್ತಿಕ್ ಎನ್‌ಕ್ಲೇವ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಾಯಿರಾಧಾ ಗ್ರೂಫ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮನೋಹರ್ ಎಸ್. ಶೆಟ್ಟಿ, ಉಡುಪಿ ಜಿಲ್ಲಾ ಕೋ-ಆಪರೇಟಿವ್ ಯೂನಿಯನ್‌ನ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ, ಮಂಗಳೂರಿನ ಡಿ.ಆರ್. ಸುವರ್ಣ ಗ್ರೂಪ್‌ನ ಜಗದೀಪ್ ಸುವರ್ಣ, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮತ್ತೊಂದು ವಿಶೇಷತೆಯೆಂದರೆ ಅತೀ ಶೀಘ್ರದಲ್ಲಿ ಪುತ್ತೂರಿನಲ್ಲಿ ತನಿಯಾ ಮೋಟಾರ್ಸ್ ಶುಭಾರಂಭಗೊಳ್ಳಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments